ಹೈದರಾಬಾದ್ ಕರ್ನಾಟಕದ ಮುಖ್ಯ ಕವಿಗಳಲ್ಲಿ ಶೈಲಜಾ ಉಡಚಣ ಅವರು ಬಂಡಾಯ ಸಾಹಿತ್ಯ ಕಾಲಘಟ್ಟದಲ್ಲಿ ಸಕ್ರಿಯವಾಗಿದ್ದರು. ಸ್ತ್ರೀ ಸಂವೇದನಾ ನೆಲೆಯಿಂದ ಅವರ ಸಾಹಿತ್ಯವನ್ನು ಅವಲೋಕಿಸಿದ ಕೃತಿಯಿದು. ಇದೊಂದು ಸಂಶೋಧನಾ ಪ್ರಬಂಧ ಆಗಿರುವುದರಿಂದ ರೂಢಿಗತ ಅಧ್ಯಾಯಗಳ ಮೂಲಕ ಪುಸ್ತಕ ರೂಪುಗೊಂಡಿದೆ. ಉದ್ದೇಶ ವ್ಯಾಪ್ತಿ, ಜೀವನ- ಸಾಧನೆ, ಸಮಗ್ರ ಸಾಹಿತ್ಯ, ಕಾವ್ಯದ ಭಾಷೆ - ಪ್ರತೀಕ, ಸಮಕಾಲೀನ ಸ್ತ್ರೀ ಸಾಹಿತ್ಯದಲ್ಲಿ ಶೈಲಜಾ ಉಡುಚಣರ ಸ್ಥಾನ-ಮಾನ, ಅಧ್ಯಯನದ ಫಲಕೃತಿ ಎಂಬ ಏಳು ಅಧ್ಯಾಯಗಳಿವೆ.
ಸಾಹಿತಿ ಚಿತ್ತಳಾ ಜೆ. ಮಠಪತಿ 1962 ಬೀದರಲ್ಲಿ ಜನಿಸಿದರು. ಜೇಡರ ದಾಸಿಮಯ್ಯ ಜೀವನ ಚರಿತ್ರೆ ಜರಿಸಿದ್ದಾರೆ. ’ಆಧುನಿಕ ಕವಿತೆಗಳ ಸಂಗ್ರಹ-ಪಠ್ಯಪುಸ್ತ”ವನ್ನು ಸಂಪಾದಿಸಿದ್ಧಾರೆ. ಬೀದರ ಜಿಲ್ಲೆಯ ಸೃಜನೇತರ ಸಾಹಿತ್ಯ, ಶಿಕ್ಷಕ ಶ್ರೀ ಪ್ರಶಸ್ತಿ-ಮುರುಘಾಮಠ ಚಿತ್ರದುರ್ಗದಿಂದ ಲಭಿಸಿದೆ. ...
READ MORE