ಹಾಲು ಮತ ಸಂಸ್ಕೃತಿ ಎಂದು ಕರೆಯಲಾಗುವ ಕುರುಬ ಸಮುದಾಯದ ಕುರಿತ ಸಂಶೋಧನಾ ಕೃತಿ ಹಾಲುಮತ ಸಂಸ್ಕೃತಿ-೨. ಈ ಕೃತಿಯು ಕುರುಬ ಸಮುದಾಯದ ಜನರ ಬದುಕು, ಆಚರಣೆಗಳನ್ನು ತಿಳಿಸುವುದು ಮಾತ್ರವಲ್ಲದೇ ಆ ಸಮುದಾಯದ ಸಂಪೂರ್ಣ ಚಿತ್ರಣವನ್ನು ಓದುಗರ ಮುಂದೆ ತೆರೆದಿಡುತ್ತದೆ. ಈ ಕೃತಿಯಲ್ಲಿ ಕುರುಬ ಸಮಾಜದ ದೈವಗಳು, ಕಲೆ-ಸಂಪ್ರದಾಯ-ಸಾಹಿತ್ಯ, ಉದ್ಯೋಗ, ಆರ್ಥಿಕ ವಿಚಾರಗಳು, ವ್ಯಕ್ತಿನಾಮ-ಗ್ರಾಮನಾಮ-ಕುಟುಂಬನಾಮ ಮೊದಲಾದ ವಿಷಯಗಳ ಬಗ್ಗೆ ಈ ಸಂಪ್ರಬಂಧಗಳು ಚರ್ಚಿಸುತ್ತವೆ. ಹಾಲುಮತ ಸಮಾಜ ಸಾಹಿತ್ಯದ ಬಗ್ಗೆ ಅಧ್ಯಯನ ಮಾಡಿದ ಬಸವಣ್ಣೆಪ್ಪ ನೀಲಪ್ಪ ಹಳವಳ್ಳಿ ಮತ್ತು ತುರುವನೂರು ಕುರುಬರ ಲಿಂಗಯ್ಯನವರ ಸಾಹಿತ್ಯ ಸಾಧನೆಯನ್ನು ತಿಳಿಸುವ ಲೇಖನಗಳು ಈ ಕೃತಿಯಲ್ಲಿವೆ.
©2024 Book Brahma Private Limited.