ತೃತೀಯ ಲಿಂಗಿಗಳ ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆ, ಸಾಮಾಜಿಕ ಮತ್ತು ಮಾನಸಿಕ ಸಂಘರ್ಷವನ್ನು ಜಾಗತಿಕ ಮಟ್ಟದಲ್ಲಿ ನಿಂತು ಅವಲೋಕನ ಮಾಡಿರುವುದು ಸ್ತುತ್ಯರ್ಹ. ಇದು ಕನ್ನಡದ ಸಂದರ್ಭಕ್ಕೆ ತೃತೀಯ ಲಿಂಗಿಗಳ ಬದುಕಿನ ಬಗ್ಗೆ ಮಾಡಿರುವ ಮೊದಲ ಸಂಶೋಧನೆಯಾಗಿದ್ದು, ನಮಗೆ ಸಮಗ್ರವಾದ ಮಾಹಿತಿಯನ್ನು ನೀಡುತ್ತದೆ. ಸದರಿ ಕೃತಿಯು ತೃತೀಯ ಲಿಂಗಿಗಳು ತಮ್ಮ ಅಸ್ತಿತ್ವಕ್ಕಾಗಿ ನಡೆಸುತ್ತಿರುವ ಹೋರಾಟಕ್ಕೆ ಸ್ಫೂರ್ತಿಯಾಗುತ್ತದೆ ಮತ್ತು ಸರಕಾರವು ಈ ಸಮುದಾಯಕ್ಕೆ ಸಿಗಬೇಕಾದ ಸವಲತ್ತು, ಹಕ್ಕುಗಳನ್ನು ನೀಡಲು ಮತ್ತು ಸ್ವಸ್ಥ ಸಮಾಜ ನಿರ್ಮಾಣ ಮಾಡಲು “ಬಿಂಬದೊಳಗೊಂದು ಬಿಂಬ ತೃತೀಯ ಲಿಂಗಿಗಳ ಅಸ್ತಿತ್ವ ಮತ್ತು ಸಾಮಾಜಿಕ ಸಂಘರ್ಷ" ಕೃತಿಯು ಸಹಾಯಕವಾಗುತ್ತದೆ ಎಂಬ ನಂಬಿಕೆ ನನ್ನದು - ಬಿ. ಎಸ್. ಲಿಂಗದೇವರು (ಮುನ್ನುಡಿಯಿಂದ)
ರೇಶ್ಮಾ ಉಳ್ಳಾಲ್ ಮೂಲತಃ ಮಂಗಳೂರಿನವರು. ಪತ್ರಕರ್ತೆತೆಯಾಗಿ ನಾಡಿನ ಹಲವು ಪತ್ರಿಕೆಗಳು ಹಾಗೂ ವೆಬ್ ಮಾಧ್ಯಮವೂ ಸೇರಿದಂತೆ ಸುಮಾರು 15 ವರ್ಷ ಪತ್ರಿಕಾರಂಗದಲ್ಲಿ ಸೇವೆಸಲ್ಲಿಸಿದ್ದಾರೆ. ಮೈಸೂರು ಮುಕ್ತ ವಿ.ವಿ.ಯಿಂದ ಸಮಾಜ ಶಾಸ್ತ್ರ ಹಾಗೂ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ಪ್ರಸ್ತುತ ಮಂಗಳೂರಿನ ಸುಯೆಝ್ ಸಂಸ್ಥೆಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತಿದ್ದಾರೆ. ...
READ MORE