ಲೇಖಕಿ ರಾಜಶ್ರೀ ಟಿ ರೈ ಪೆರ್ಲ ಅವರ ಕೃತಿ ‘ತುಳುನಾಡಿನ ಮೂರಿಗಳ ಆರಾಧನೆ -ಸಂಶೋಧನಾ ಗ್ರಂಥ’. ಈ ಕೃತಿಯಲ್ಲಿ ಪಿ.ಎಸ್. ಯಡಪಡಿತ್ತಾಯ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಕರಾವಳಿ ಪ್ರದೇಶದ ಆದರಲ್ಲೂ ತುಳು ಜಾನಪದ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆಗಳು ನಡೆದಿದ್ದು, ಅವುಗಳ ನಡುವೆಯೂ ಇನ್ನಷ್ಟು ಹೊಸ ವಿಷಯಗಳು ಸಂಶೋಧಕರನ್ನು ಸೆಳೆಯುತ್ತಿವೆ ಎಂಬುದಕ್ಕೆ ಈ ಕೃತಿ ಸಾಕ್ಷಿಯಾಗಿದೆ. ಮೂರಿಗಳ ಆಚರಣೆ, ಅವುಗಳ ಆರಾಧನಾ ಕೇಂದ್ರಗಳು, ಪಾಡ್ಡನಗಳ ಸಂಗ್ರಹ ಮತ್ತು ಕನ್ನಡಾನುವಾದ, ಮೂಲಯ ಕುರಿತಾದ ಕಥನಗಳನ್ನು ಸಂಶೋಧನಾ ಶಿಸ್ತಿನಿಂದ ಮುಂಡಿಸಿರುವ ಈ ಕೃತಿ ಕರಾವಳಿಯಲ್ಲಿ ಹೊಸ ಸಂಶೋಧನೆಗಳನ್ನು ಬೆಳೆಸುವುದಕ್ಕೆ ಯೋಗವಾಗುವ ಹಲವು ವಿಚಾರಗಳನ್ನು ಹೊಂದಿದೆ. ತುಳುವಿನ ಜನಪ್ರಿಯ ಸಾಹಿತಿ ಯಾಗಿರುವ, ಗೃಹಿಣಿಯಾಗಿದ್ದುಕೊಂಡು ಇಂತಹ ಸಂಶೋಧನಾ ಪ್ರೀತಿಯ ಕಾರ್ಯದಲ್ಲಿ ತೊಡಗಿಕೊಂಡಿರುವ ರಾಜಶ್ರೀ ರೈ ಪೆರ್ಲ ಅವರನ್ನು ನಾನು ಹಾರ್ದಿಕವಾಗಿ ಅಭಿನಂದಿಸುತ್ತೇನೆ ಎಂದಿದ್ದಾರೆ.
©2024 Book Brahma Private Limited.