ವಡ್ಡಾರಾಧನೆ ಎಂಬುದು ಕನ್ನಡದಲ್ಲಿ ದೊರೆತಿರುವ ಕೃತಿಗಳಲ್ಲಿ, ಎಲ್ಲದಕ್ಕಿಂತ ಹಳೆಯದಾದ ಮೊಟ್ಟಮೊದಲ ಗದ್ಯ ಕೃತಿಯಾಗಿದೆ. ಕರ್ತೃವಿನ ಗೊಂದಲವನ್ನು ಮುಖ್ಯ ಚರ್ಚೆಯಾಗಿ ಆಯ್ಕೆ ಮಾಡಿಕೊಂಡು ಆರಂಭವಾಗುತ್ತದೆ. ಇದನ್ನು ಶಿವಕೋಟಾಚಾರ್ಯ ಎಂಬಾತ ರಚಿಸಿದ್ದ ಎಂಬ ಸತ್ಯವನ್ನು ಬದಿಗೊತ್ತಿ ಅದರ ವಾಸ್ತವ ಹೆಸರು ‘ಆರಾಧನಾ ಕರ್ಣಾಟಟೀಕಾ’ ಎಂತಲೂ ಇದನ್ನು ರಚಿಸಿದ್ದು ಭ್ರಾಜಿಷ್ಣು ಎಂಬಾತ ಎಂತಲೂ ಮನವರಿಕೆ ಮಾಡಿಕೊಡುತ್ತಲೇ ಹಳೆಗನ್ನಡದ ಮೂಲ ಕಥಾನಕವನ್ನು ಮರು ಓದಿಗೆ ಈ ಕೃತಿಯೂ ಆಹ್ವಾನ ನೀಡುತ್ತದೆ.
.ಡಾ. ಶಾಂತಿನಾಥ ದಿಬ್ಬದ ಅವರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸೋಮಾಪುರ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂಎ, ಪಿಎಚ್ ಡಿ ಪದವೀಧರರು. ಕರ್ನಾಟಕ ವಿ.ವಿ, ಗುಲಬರ್ಗಾ ವಿ.ವಿ. ಯಲ್ಲಿ ಪ್ರಾಧ್ಯಾಪಕರಾಗಿ ಹಾಗೂ ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ವಿ.ವಿ. ಯಲ್ಲಿ ಪ್ರಾಧ್ಯಾಪಕರಾಗಿ ನಂತರ ಕುಲಸಚಿವರಾಗಿ 2015 ರಲ್ಲಿ ನಿವೃತ್ತರಾದರು. ಕೃತಿಗಳು: ಮಹಾಕವಿ ಪಂಪ ಮತ್ಯು ಅವನ ಕೃತಿಗಳು, ಪಂಪ ಭಾರತ ಸಾಂಸ್ಕೃತ ಅಧ್ಯಯನ (ಪಿಎಚ್ ಡಿ ಮಹಾಪ್ರಬಂಧ), ವಾಗ್ದೇವಿಯ ಭಂಡಾರದ ಮುದ್ರೆ, ಆಗಮಿಕ, ಜೀವಪರ-ಜನಪರ, ಜೈನ ಸಂಸ್ಕೃತಿ ಸಮೀಕ್ಷೆ (ಸಂಪಾದತ ಕೃತಿಗಳು) ಭ್ರಾಜಿಷ್ಣು ವಿರಚಿತ ಆರಾಧನಾ ಕರ್ಣಾಟಟೀಕಾ(ವಡ್ಡಾರಾಧನೆ), ಮುನಿ ...
READ MORE