ಡಾ. ನಟರಾಜು ಜೆ.ಆರ್. ಅವರು ಪ್ರೊ.ಸಾಂಬಮೂರ್ತಿ ಅವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಅಧ್ಯಯನ ಕೈಗೊಂಡು ಪದವಿ ಪಡೆದುಕೊಂಡಿದ್ದಾರೆ. ಸಂಶೋಧನೆ ಚರ್ಚೆಗಳಲ್ಲಿ ಪಾಲ್ಗೊಳ್ಳುವ ಇವರ ಗುಣವೇ ಪ್ರಸ್ತುತ ಲೇಖನಗಳ ಸಂಕಲನ. ಪ್ರಸ್ತುತ ಕೃತಿಯಲ್ಲಿರುವ ಒಂಬತ್ತು ಲೇಖನಗಳು ಭಾಷೆಯೊಂದಿಗೆ ಬೆಳೆದು ಬಂದಿರುವಂತಹುದು. ಭಾಷೆ ಕುತೂಹಲ ಹುಟ್ಟಿಸುವಂತಹುದು. ಹಾಗಾಗಿಯೆ ಭಾಷೆಕುರಿತಂತೆ ನಡೆದಿರುವಷ್ಟು ಚರ್ಚೆಗಳು ಬೇರಾವುದೇ ವಿಷಯದಲ್ಲಿ ನಡೆದಿಲ್ಲ. ಇತ್ತೀಚಿನ ದಿನಗಳಲ್ಲಿ ಭಾಷಿಕ ಅಧ್ಯಯನಗಳಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಭಾಷೆ ಕೇವಲ ಸಂವಹನಕ್ಕಷ್ಟೆಯಲ್ಲ ಅದರೊಳಗೆ ಸಂಸ್ಕೃತಿಯು ಅಡಗಿರುತ್ತದೆ. ಜೊತೆಗೆ ಕಾಲ ಕಾಲಕ್ಕೆ ಬದಲಾವಣೆಯ ಪ್ರಕ್ರಿಯೆಗೂ ಒಳಗಾಗುತ್ತಿರುತ್ತದೆ. ಪ್ರಸ್ತುತ ಕೃತಿಯ ವ್ಯಕ್ತಿನಾಮ ಕುರಿತ ಲೇಖನಗಳು ಚಾರಿತ್ರಿಕ ಅಂಶಗಳನ್ನು, ಆಧುನಿಕ ಪರಿಸರದಲ್ಲಿ ಬದಲಾಗುತ್ತಿರುವ ಹೆಸರುಗಳ ಸ್ವರೂಪವನ್ನು ತಿಳಿಸುತ್ತವೆ. ಶಾಸನ ಕುರಿತ ಇವರ ಆಸಕ್ತಿ ಮೂಡಿ ಬಂದುದು ಗುಲಬರ್ಗ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಾಗಾರದ ಫಲ ಎನ್ನುತ್ತಾರೆ ಪ್ರಾಧ್ಯಾಪಕರಾದ ಪ್ರೊ. ಸಾಂಬಮೂರ್ತಿ. ಆ ಮೂಲಕ ನಟರಾಜು ಅವರು ಶಾಸನಗಳ ತಿಳುವಳಿಕೆಯನ್ನು ಪಡೆದು ಭಾಷಿಕ, ಸಾಂಸ್ಕೃತಿಕ ಅಂಶಗಳನ್ನು ಗಮನಿಸುವ ಲೇಖನಗಳನ್ನು ಬರೆದರು. ಅಂತಹ ಎಲ್ಲಾ ಲೇಖನಗಳು ಈ ಕೃತಿಯಲ್ಲಿ ಸೇರಿವೆ.
ನಟರಾಜು ಜೆ. ಆರ್ ಅವರು ತುಮಕೂರು ಜಿಲ್ಲೆ, ಗುಬ್ಬಿ ತಾಲೂಕಿನ ಜೋಗಿಹಳ್ಳಿಯವರು. ತಂದೆ- ರಂಗಯ್ಯ, ತಾಯಿ- ರಂಗಮ್ಮ. ಕನ್ನಡ ಎಂ.ಎ, ಚರಿತ್ರೆ, ಎಂ.ಇಡಿ. ಪಿಎಚ್.ಡಿ, ಎನ್.ಇ.ಟಿ, ಜೆ.ಆರ್.ಎಫ್, ಟಿ.ಇ.ಟಿ ಪೂರ್ಣಗೊಳಿಸಿರುವ ಇವರು ಪತ್ರಿಕೋಧ್ಯಮ, ಕನ್ನಡ ಭಾಷಾಧ್ಯಯನ, ಶಾಸನಶಾಸ್ತ್ರ, ಪುರಾತತ್ವ, ಸಂಸ್ಕೃತಿ ಮತ್ತು ಪ್ರವಾಸೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲಮಾ ಮಾಡಿದ್ದಾರೆ. ಉಪನ್ಯಾಸಕರಾಗಿ ಹಲವು ಕಡೆ ಕಾರ್ಯನಿರ್ವಹಿಸಿರುವ ನಟರಾಜು ಅವರು ಪ್ರಸ್ತುತ ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನಲ್ಲಿ ಪೂರ್ಣಕಾಲಿಕ ಅಥಿತಿ ಉಪನ್ಯಾಸಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಳದ ಓದು, ಮತ್ತು ಬರಹದ ಹವ್ಯಾಸವಿರುವ ನಟರಾಜ್ ಅವರು ‘ವ್ಯಕ್ತಿನಾಮ ಮತ್ತು ಶಾಸನಗಳ ಭಾಷಿಕ ಸಂಗತಿಗಳು’ ಎಂಬ ...
READ MORE