ಲೇಖಕ ಡಾ. ಪ್ರಕಾಶ ಗ. ಖಾಡೆ ಅವರ ಸಾಹಿತ್ಯ ಕೃತಿ ʻಹಲಸಂಗಿ ಸಾಹಿತ್ಯದ ದೇಸಿಯತೆʼ. ಪುಸ್ತಕದ ಬೆನ್ನುಡಿಯಲ್ಲಿ ಪುರುಷೋತ್ತಮ ಗಲಗಲಿ ಅವರು, “ಹಿಂದೆೆ ಡಾ.ಜಿ. ಎಸ್. ಶಿವರುದ್ರಪ್ಪನವರು 'ಹಲಸಂಗಿ ನವೋದಯ ಸಾಹಿತ್ಯದ ನಾಲ್ಕನೆಯ ಕೇಂದ್ರ' ಎಂದು ಪರಿಗಣಿಸುವ ಅನಿವಾರ್ಯತೆಯನ್ನು ಕುರಿತು ತಮ್ಮ ಭಾಷಣದಲ್ಲಿ ಹೇಳಿದ್ದರು. ಅದನ್ನು ಹೇಳಿದವರಿಗೂ ಮನವರಿಕೆಯಾಗಿತ್ತು. ಆದರೆ ಅದನ್ನು ಲಿಖಿತದಲ್ಲಿ ಹೇಳಿ, ಸಮರ್ಥವಾದ ರೀತಿಯಲ್ಲಿ ನೀವು ಸಮರ್ಥನೆ ಮಾಡಿಕೊಂಡಿದ್ದೀರಿ. ಡಾ.ಗುರುಲಿಂಗ ಕಾಪಸೆ ಅವರ ನಂತರದ ತಲೆಮಾರಿನವರಲ್ಲಿ ಮಧುರಚೆನ್ನರ ಬಗ್ಗೆ ಇಷ್ಟೊಂದು ಆಳವಾಗಿ ಅಧ್ಯಯನ ಮಾಡಿ ತರ್ಕಬದ್ಧವಾದ ರೀತಿಯಲ್ಲಿ ನಿರೂಪಿಸಬಲ್ಲವರಲ್ಲಿ ನೀವು “at the top” ಎಂದು ಭಾವಿಸಿದ್ದೇನೆ” ಎಂದು ಹೇಳಿದ್ದಾರೆ.
©2024 Book Brahma Private Limited.