ಲೇಖಕ ಎಮ್.ಎಸ್. ಎಸ್. ಮೂರ್ತಿ ಅವರು ಜೀವಭೌತ ವಿಜ್ಞಾನದ ಪದವೀಧರರು. ಭಾಭಾ ಪರಮಾಣು ಅನುಸಂಧಾನ ಕೇಂದ್ರದ ವಿಕಿರಣ ಸುರಕ್ಷಾ ವಿಭಾಗದಲ್ಲಿ 40 ವರ್ಷಗಳ ಕಾಲ ಸೇವೆ ಸಲ್ಲಿಸಿದ ಹಿರಿಯ ವಿಜ್ಞಾನಿ. ಶತಶತಮಾನಗಳಿಂದಲೂ ಕಾಲರಾ ರೋಗದಿಂದ ಲಕ್ಷಾಂತರ ಮಂದಿ ಸಾವನಪ್ಪುತಿದ್ದರೂ ಅವುಗಳ ನಿಯಂತ್ರಣಕ್ಕೆ ವಿಶ್ವದಾಂದ್ಯಂತ ವಿಜ್ಞಾನಿಗಳು ಮಾಡಿದ ಶ್ರಮ ಫಲಿಸಲಿಲ್ಲ. ಕಾರಣ ವಿಜ್ಞಾನಿಗಳಿಗೆ ಕಾಲರಾ ರೋಗದ ಬಗ್ಗೆ ಇದ್ದ ಕೆಲವು ತಪ್ಪು ಕಲ್ಪನೆಗಳು. ಆದರೆ ಕಾಲರಾ ಬಗ್ಗೆ ಧೈರ್ಯದಿಂದ ಅನ್ವೇಷಣೆ ಮಾಡಿ ವಿಜಯಶಾಲಿಯಾದವರು ಶಂಭುನಾಥ್ ಡೇ. ಅಂದಿನ ಕಾಲದಲ್ಲಿ ಸೌಲಭ್ಯಗಳ ಕೊರತೆ ಇದ್ದರೂ ಕೂಡ ಸಂಶೋಧನೆ ಮಾಡಿ ಯಶಸ್ಸು ಕಂಡ ಶಂಭುನಾಥ್ ಡೇ ಅವರ ವೈದ್ಯಕೀಯ ಸಾಹಸಗಳ ಕುರಿತು ಇಲ್ಲಿ ವಿವರಿಸಿದ್ದಾರೆ.
©2024 Book Brahma Private Limited.