ಖ್ಯಾತ ಸಂಶೋಧಕ ಡಾ. ಬಿ.ವಿ. ಶಿರೂರ ಅವರು ರಚಿಸಿದ ಸಂಶೋಧನಾ ಕೃತಿ-ಸಂಶೋಧನಾ ಸ್ವರೂಪ. ಸಂಶೋಧನೆ ನಡೆಸಲು ಇರಬೇಕಾದ ಅಗತ್ಯದ ನಿಯಮಗಳು, ಸ್ವರೂಪಗಳು, ಸೂತ್ರಗಳು,, ವ್ಯಾಪ್ತಿ ಇತ್ಯಾದಿ ಸಂಗತಿಗಳ ಕುರಿತು ತುಂಬಾ ವಿಸ್ತೃತವಾಗಿ ಚರ್ಚಿಸಿರುವ ಕೃತಿ ಇದು. ಸಂಶೋಧನಾ ವಿದ್ಯಾರ್ಥಿಗಳಿಗೆ ಹಾಗೂ ಬೋಧಕರಿಗೆ ತುಂಬಾ ಉಪಯುಕ್ತವಾದ ಕೃತಿ ಹಾಗೂ ಆಕರ ಗ್ರಂಥವಾಗಿದೆ.
ಬಿ.ವಿ. ಶಿರೂರು (ಬಸವರಾಜವೀರಭದ್ರಪ್ಪ ಶಿರೂರು) ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಿ ತಾಲೂಕಿನ ಆಡೂರು ಗ್ರಾಮದವರು. ತಂದೆ ವೀರಭದ್ರಪ್ಪ, ತಾಯಿ ಅಂದಾನಮ್ಮ. 02-03-1941 ರಂದು ಜನನ. ಆಡೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಕೊಪ್ಪಳ, ಕುಕನೂರು ಹಾಗೂ ಯಲಬುರ್ಗಾದಲ್ಲಿ ಮಾಧ್ಯಮಿಕ ಶಿಕ್ಷಣ, ರಾಯಚೂರಿನಲ್ಲಿ ಪಿಯುಸಿ, ಧಾರವಾಡದಲ್ಲಿ ಪದವಿ ಶಿಕ್ಷಣ, ಕರ್ನಾಟಕ ವಿವಿಯಿಂದ ಎಂ.ಎ, ನಂತರ ‘ಶ್ರವಣಬೆಳ್ಗೊಳ-ರಾಜಕೀಯ, ಸಾಂಸ್ಕೃತಿಕ ಮಹತ್ವ’ ವಿಷಯವಾಗಿ ಪಿಎಚ್ ಡಿ (1973) ಪಡೆದರು. ನರೇಗಲ್ಲದ ಶ್ರೀ ಅನ್ನದಾನೀಶ್ವರ ಪದವಿ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿದ್ದರು. ನಂತರ ಕರ್ನಾಟಕ ವಿವಿಯ ಕನ್ನಡ ಅಧ್ಯಯನ ಪೀಠದಲ್ಲಿಉತ್ತಮ ಸಂಶೋಧಕ, ಮಾರ್ಗದರ್ಶಕ ಎಂದು ಪ್ರಸಿದ್ಧಿ ಪಡೆದು ನಿವೃತ್ತರಾಗಿದ್ದಾರೆ. ಕೃತಿಗಳು: ಷಟಸ್ಥಲಜ್ಞಾನ ...
READ MORE