ಸಂಶೋಧನೆಯ ಸಾಂಪ್ರದಾಯಿಕ ವ್ಯಾಖ್ಯಾನ ಮತ್ತು ಸಂಶೋಧನೆಯ ದೃಷ್ಟಿಕೋನ ಬದಲಾಯಿಸಲು ಪೂರಕವಾಗುವ ನೆಲೆಗಳನ್ನು ಈ ಕೃತಿ ನೀಡುತ್ತದೆ. ಸ್ಥಾಪಿತ ವಾದಗಳೊಂದಿಗೆ ಸಂವಾದ ನಡೆಸಿ ಹೊಸ ವಾದ ಪ್ರತಿಪಾದನೆ ಮಾಡುವುದು ಹಾಗೂ ಸಂಪನ್ಮೂಲಗಳ, ಸ್ಥಾನಮಾನಗಳ ಅಸಮಾನ ಹಂಚುವಿಕೆಗೆ ಕಾರಣವಾಗಿರುವ ಸತ್ಯವಾದಗಳನ್ನು ಅಲ್ಲಗಳೆದು ಹೊಸ ಸತ್ಯವಾದಗಳನ್ನು ಮುಂಚೂಣಿಗೆ ತರುವುದು ಸಂಶೋಧನೆಯ ದೊಡ್ಡ ಜವಾಬ್ದಾರಿ ಎಂಬುದನ್ನು ಲೇಖಕರು ಸೂಚಿಸುತ್ತಾರೆ.
ಸಂಶೋಧನೆ ಎಂದರೇನು?, ಯಾಕೆ ಸಂಶೋಧನೆ, ಹೇಗೆ ಸಂಶೋಧನೆ, ವಿಷಯ ಆಯ್ಕೆ, ಸಮಸ್ಯೀಕರಿಸುವುದು, ಸಂಶೋಧನ ಪ್ರಸ್ತಾವ, ಸಾಕ್ಷಿ ಪುರಾವೆಗಳ ಸಂಗ್ರಹ, ವಾದ ಮಂಡನೆ ಎಂಬ ಅಧ್ಯಾಯಗಳಲ್ಲಿ ಚರ್ಚಿಸಲಾಗಿದೆ.
©2024 Book Brahma Private Limited.