ಛಂದಸ್ಸಿನ ಅಧ್ಯಯನದ ನೆಲೆಗಳು

Author : ಎಸ್.ಎಸ್. ಅಂಗಡಿ

Pages 1

Synopsys

ಛಂದಸ್ಸಿನ ಕುರಿತು ಬರೆಯಬೇಕೆಂಬುದು ಕಲಬುರ್ಗಿ ಅವರ ಬಹುದಿನದ ಆಸೆಯಾಗಿತ್ತು. ಅದೊಂದು ಅಲಂಕಾರವಾದುದರಿಂದ ಸಹಜವಾಗಿಯೇ ವಿದ್ವಾಂಸರಾದ ಕಲಬುರ್ಗಿ ಅವರಿಗೆ ಅದರತ್ತ ಆಸಕ್ತಿ ಬೆಳೆದಿತ್ತು. ಹಾಗೆ ಛಂದಸ್ಸಿನ ಕುರಿತು ಆಗಾಗ ಕಲಬುರ್ಗಿ ಅವರು ಮಾಡಿಕೊಂಡ ಸಂಶೋಧನಾ ಟಿಪ್ಪಣಿಗಳ ಸಂಗ್ರಹವೇ ಈ ಕೃತಿ. ಹಾಗೆ ಛಂದಸ್ಸಿನ ಕುರಿತು ಆಗಾಗ ಕಲಬುರ್ಗಿ ಅವರು ಮಾಡಿಕೊಂಡ ಸಂಶೋಧನಾ ಟಿಪ್ಪಣಿಗಳ ಸಂಗ್ರಹವೇ ಈ ಕೃತಿ. 

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕದ ಕುರಿತು ಮಾತನಾಡಿದ್ದ, ಕೃತಿಯ ಸಂಪಾದಕ ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ,  ಡಾ. ಎಸ್‌.ಎಸ್. ಅಂಗಡಿ ಅವರು ’ಷಟ್ಪದಿಯ ರಹಸ್ಯವನ್ನು ಬಹಿರಂಗ ಮಾಡಿದ ಮೊಟ್ಟಮೊದಲ ಸಂಶೋಧಕರು ಕಲಬುರ್ಗಿ. ಛಂದಸ್ಸನ್ನು ಅರಿತು ಅದನ್ನು ಮೀರಿ ಬೆಳೆದವನು ಕವಿಯಾಗುತ್ತಾನೆ ಎಂಬುದು ಕಲಬುರ್ಗಿ ಅವರ ಅಭಿಪ್ರಾಯ. ರಸ, ಭಾವ, ನಾದ, ಲಯದ ಆಧಾರದಲ್ಲಿ ಅವರು ಛಂದಸ್ಸನ್ನು ವ್ಯಾಖ್ಯಾನಿಸಿದ್ದಾರೆ’ ಎಂದು ವಿವರಿಸಿರುವುದು ಕೃತಿಯ ಮಹತ್ವವನ್ನು ಸಾರುತ್ತದೆ.

About the Author

ಎಸ್.ಎಸ್. ಅಂಗಡಿ
(10 June 1966)

ಪ್ರೊ. ಎಸ್.ಎಸ್. ಅಂಗಡಿ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರು. ಪ್ರಾಚೀನ ಸಾಹಿತ್ಯ, ಹಸ್ತಪ್ರತಿ ಗ್ರಂಥ ಸಂಪಾದನೆ, ಭಾಷಾಶಾಸ್ತ್ರ ಬಗೆಗೆ ಅಪಾರ ಪಾಂಡಿತ್ಯ ಹೊಂದಿರುವ ಅವರು 'ಸರಳ ಶಬ್ದಮಣಿ ದರ್ಪಣ', 'ಕನ್ನಡ  ಹಸ್ತಪ್ರತಿ ಭಾಷಿಕ ವಿವೇಚನೆ', 'ಕರ್ನಾಟಕ ಗ್ರಂಥ ಸಂಪಾದನೆ', 'ಸರಳ ಕವಿರಾಜಮಾರ್ಗ' ಕೃತಿಗಳನ್ನು ಪ್ರಕಟಿಸಿದ್ದಾರೆ.  ಅವರು ಪ್ರಕಟಿಸಿದ ಸಂಶೋಧನಾ ಲೇಖನಗಳು ಹೀಗಿವೆ: ಗ್ರಂಥಸಂಪಾದನೆ : ಕೆ.ಜಿ.ಕುಂದಣಗಾರ, ಕೆ.ಜಿ.ಕುಂದಣಗಾರ ಅಧ್ಯಯನ ವಿಧಾನ, ಹರ್ಮನ್ ಮೋಗ್ಲಿಂಗ್ ಸಂಶೋಧನ ವೈಧಾನಿಕತೆ, ಗ್ರಂಥ ಸಂಪಾದನೆ: ಶಿ.ಚ.ನಂದಿಮಠ, ಗ್ರಂಥ ಸಂಪಾದನೆ: ಗೊರೆಬಾಳ್ ಹನುಮಂತರಾಯ, ಗ್ರಂಥ ಸಂಪಾದನೆ: ಎನ್.ಅನಂತರಂಗಾಚಾರ್, ಕರ್ನಾಟಕ ಕವಿಚರಿತೆ: ರಚನೆಯ ...

READ MORE

Related Books