ಒಂದು ಜಾತಿಯ ಉಪಪಂಗಡಗಳ ಬಗ್ಗೆ ಬರೆಯುವುದು ಸವಾಲಿನ ಕೆಲಸ ಮತ್ತು ಸೂಕ್ಷ್ಮ ವಿಚಾರ. ಹಾಗಾಗಿ
ಗ್ರಂಥದ ಪ್ರಧಾನ ಸಂಪಾದಕ ಡಾ.ಎಂ.ಎಂ. ಕಲಬುರ್ಗಿ ಅವರು ಕೃತಿ ರಚನೆ ವೇಳೆ ಜಾಣ್ಮೆಯೊಂದನ್ನು ಮೆರೆದಿದ್ದಾರೆ. ಆಯಾ ಉಪಪಂಗಡಗಳಿಂದ ಬಂದ ವಿದ್ವಾಂಸರೇ ತಮ್ಮ ತಮ್ಮ ಜಾತಿಗಳ ಬಗ್ಗೆ ಬರೆಯುವಂತೆ ಪ್ರೇರೇಪಿಸಿದ್ದಾರೆ. ಸುಮಾರು ೨೫ ಉಪಪಂಗಡಗಳ ಚರಿತ್ರೆ ಮತ್ತು ಲಿಂಗಾಯತದೊಂದಿಗೆ ಅವು ತಮ್ಮನ್ನು ಗುರುತಿಸಿಕೊಂಡಿರುವ ಬಗೆಯನ್ನು ಕೃತಿ ಬಿಚ್ಚಿಡುತ್ತದೆ.
ಹೊರಸುತ್ತಿನ ಲಿಂಗಾಯತರು, ಇನ್ನೂ ಹೊರಸುತ್ತಿನ ಲಿಂಗಾಯತರು, ಒಳಸುತ್ತಿನ ಲಿಂಗಾಯತರು, ಒಳಸುತ್ತಿನ ಲಿಂಗಾಯತರು ಎಂದು ಅಧ್ಯಯನಕ್ಕಾಗಿ ವಿಂಗಡಣೆ ಮಾಡಿಕೊಳ್ಳಲಾಗಿದೆ. ಉಪಪಂಗಡಗಳ ದಾಖಲೀಕರಣದ ಇತಿಹಾಸ, ಅದರ ಮಹತ್ವವನ್ನೂ ಕೃತಿಯಲ್ಲಿ ವಿವರಿಸಲಾಗಿದೆ.
ಕರ್ನಾಟಕದಲ್ಲಿ ಸಂಶೋಧನಾ ಕ್ಷೇತ್ರದ ಪ್ರಮುಖ ಹೆಸರು ಎಂ.ಎಂ. ಕಲಬುರ್ಗಿ. ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲ ಗ್ರಾಮದಲ್ಲಿ 1938ರ ನವೆಂಬರ್ 28ರಂದು ಜನಿಸಿದರು. ತಾಯಿ ಗುರಮ್ಮ; ತಂದೆ ಮಡಿವಾಳಪ್ಪ. ಕಲಬುರ್ಗಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ (1960) ಮತ್ತು ಎಂ.ಎ (1962) ಪದವಿ ಪಡೆದ ಅವರು ಸಲ್ಲಿಸಿದ ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ (1968) ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಸಂದಿತ್ತು. ಕರ್ನಾಟಕ ಕಾಲೇಜಿನಲ್ಲಿ ...
READ MORE