ಡಿ.ಎನ್.ಅಕ್ಕಿ ಅವರ ಸಂಶೋಧನಾ ಲೇಖನಗಳನ್ನು ಒಳಗೊಂಡ ಕೃತಿ ’ಸಿರಿನಾಡ ಸಿರಿ’. ಸಂಶೋಧಕ, ಸಾಹಿತಿ ಡಾ. ಹಂಪನಾ ಅವರು ಮುನ್ನುಡಿಯಲ್ಲಿ ’ ಮೂಲೆಮಡಕುಗಳಲ್ಲಿ, ದನದ ಕೊಟ್ಟಿಗೆಯಲ್ಲಿ, ತಿಪ್ಪೆಯಲ್ಲಿ ಅನಾಥವಾಗಿ, ಅಜ್ಞಾನವಾಗಿ, ಅಂಗಾತವಾಗಿ ಬಿದ್ದಿದ್ದ ಶಾಸನ, ನಾಣ್ಯ, ವಿಗ್ರಹ ಹೀಗೆ ಪರಂಪರೆಯ ಪಳಿಯುಳಿಕೆಗಳನ್ನು ಸಂಶೋಧನೆ ಮಾಡಿ ಸಂಗ್ರಹಿಸಿದ ಲೇಖನಗಳು ಸಗರನಾಡ ಸಿರಿ’ಯಲ್ಲಿವೆ. ಖ್ಯಾತ ಸಂಶೋಧಕ ಸೀತಾರಾಮ ಜಾಗೀರದಾರ್ ಕೃತಿಯ ಬೆನ್ನುಡಿಯಲ್ಲಿ ’ಶಹಾಪುರ ತಾಲೂಕು ವ್ಯಾಪ್ತಿಯ ಐತಿಹಾಸಿಕ ಮಹತ್ವದ ಸಂಗತಿಗಳನ್ನು ಈ ಕಿರುಹೊತ್ತಗೆಯಲ್ಲಿ ಸಂಗ್ರಹಿಸಲಾಗಿದೆ. ನಿನ್ನೆಯ ಈ ಐತಿಹಾಸಿಕ ದಾಖಲೆಗಳ ಅವ್ಯವಸ್ಥೆಗೆ ಡಿ.ಎನ್. ಅಕ್ಕಿ ಮರುಗಿದ್ಗಿದಾರೆ’ ಎಂದು ಅಕ್ಕಿ ಅವರ ಸಂಶೋಧನಾ ಕಳಕಳಿಯನ್ನು ಪ್ರಶಂಸಿಸಿದ್ದಾರೆ.
ಡಿ.ಎನ್. ಅಕ್ಕಿ ಎಂದು ಸಾಹಿತ್ಯಲೋಕದಲ್ಲಿ ಚಿರಪರಿಚಿತವಾಗಿರುವ ದೇವೇಂದ್ರ ನಾಭಿರಾಜ ಅಕ್ಕಿ ಅವರು ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಗೋಗಿ ಗ್ರಾಮದವರು. ಗೋಗಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಚಿತ್ರಕಲಾ ಶಿಕ್ಷಕರಾಗಿ ನಿವೃತ್ತರಾಗಿದ್ದು, ಅವಗಣನೆಗೆ ಒಳಗಾಗಿದ್ದ ಹೈದರಾಬಾದ್ ಕರ್ನಾಟಕ ಪ್ರದೇಶದ ಐತಿಹಾಸಿಕ ಸ್ಮಾರಕಗಳ ಬಗ್ಗೆ ಅವರು ಮಾಡಿದ ಕೆಲಸ ಅನನ್ಯ. ಕವಿತೆಯ ಮೂಲಕ ಸಾಹಿತ್ಯಲೋಕ ಪ್ರವೇಶಿಸಿದ ಅಕ್ಕಿ ಅವರ ಬಹುತೇಕ ನಾಟಕಗಳು ಬಾನುಲಿಯಲ್ಲಿ ಪ್ರಸಾರಗೊಂಡಿವೆ. ಮೂಡಬಿದಿರೆ ಜೈನಮಠದಿಂದ ಸ್ವಸ್ತಿ ಶ್ರೀ ಭಟ್ಟಾರಕ ಪುರಸ್ಕಾರ ಪ್ರಶಸ್ತಿ, ಹೊಂಬುಜದ ಜೈನ್ ಮಠದಿಂದ ಸಿದ್ದಾಂತ ಕೀರ್ತಿ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಕರ್ನಾಟಕ ರಾಜ್ಯ ...
READ MORE