ತಮ್ಮ ಆಳ ಅರಿವಿನ ಆಧಾರದಿಂದಾಗಿ ಸಾಹಿತ್ಯ ಅಭ್ಯಾಸ ಮಾಡುವವರಿಗೆ ಡಾ. ಎಂ.ಎಂ. ಕಲಬುರಗಿ ಅವರು ಕೊಟ್ಟ ಕೊಡುಗೆ ಅಪಾರ. ಅವುಗಳಲ್ಲಿ ಕನ್ನಡ ನಾಮವಿಜ್ಞಾನವೂ ಒಂದು. ಜನಪದಶಾಸ್ತ್ರ, ಸಂಸ್ಕೃತಿ ಶಾಸ್ತ್ರ, ಭಾಷಾಶಾಸ್ತ್ರ, ಗ್ರಂಥಸಂಪಾದನೆ ನಂತರ ಕನ್ನಡದಲ್ಲಿ ನಾಮ ವಿಜ್ಞಾನವನ್ನು (onomastics) ಜನಪ್ರಿಯಗೊಳಿಸಲು ಅವರು ಶ್ರಮಿಸಿದ ಪರಿಣಾಮವೇ ಈ ಕೃತಿ. ವ್ಯಕ್ತಿನಾಮ, ಸ್ಥಳನಾಮ, ಗ್ರಾಮನಾಮಗಳೆಂದು ವಿಭಜಿಸಿ ಕನ್ನಡದ ಮಟ್ಟಿಗೆ ನಾಮವಿಜ್ಞಾನ ಹೇಗೆ ಅನ್ವಯವಾಗಲಿದೆ ಎಂಬ ಪ್ರಯೋಗ ಮಾಡಿದ್ದಾರೆ.
©2024 Book Brahma Private Limited.