‘ಇತಿಹಾಸದ ನಕ್ಷತ್ರಗಳು’ ಸಂಶೋಧಕ ಡಾ. ಎ.ವಿ. ನರಸಿಂಹಮೂರ್ತಿ ಅವರ ಸಂಶೋಧನಾತ್ಮಕ ಕೃತಿ. ಎ.ವಿ. ನರಸಿಂಹ ಮೂರ್ತಿ ಕನ್ನಡದ ಮಹತ್ವದ ಇತಿಹಾಸ ಸಂಶೋದಕರು. ಕರ್ನಾಟಕ ಮತ್ತು ಭಾರತದ ಇತಿಹಾಸದ ಹಲವಾರು ಆಯಾಮಗಳಲ್ಲಿ, ವಿಭಿನ್ನ ದೃಷ್ಠಿಕೋನಗಳಲ್ಲಿ ಅಧ್ಯಯನ ನಡೆಸಿ ಮಹತ್ವದ ಕೃತಿ ರಚತಿಸಿದ್ದಾರೆ. ಈ ಕೃತಿಯಲ್ಲಿ 112 ಇತಿಹಾಸ ಶೋಧದ ಲೇಖನಗಳು ಸಂಕಲನಗೊಂಡಿವೆ.
ಡಾ.ಎ.ವಿ.ನರಸಿಂಹಮೂರ್ತಿ ಅವರು ಇತಿಹಾಸ ಸಂಶೋಧನೆಯಲ್ಲಿ ಕೆಲಸ ಮಾಡಿದ್ದಾರೆ. ಇವರಿಗೆ ಚಿದಾನಂದ ಪ್ರಶಸ್ತಿ ಲಭಿಸಿದೆ. ‘ಐವರು ಸಂತರು, ಸಂಸ್ಕೃತ ಮತ್ತು ವಿಜ್ಞಾನ, ಎಲ್ಲಾ ಧರ್ಮಗಳ ಸಾರವೂ ಒಂದೇ, ಶ್ರೀ ವಿದ್ಯೆಯ ಸಾರ’ - ಮುಂತಾದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿ, ಸಂಪಾದಿಸಿದ್ದಾರೆ. ಕರ್ನಾಟಕ ವಾಸ್ತುಶಿಲ್ಪ ಉದ್ಯಾನ ಅವರ ಮತ್ತೊಂದು ಸಂಪಾದಿತ ಕೃತಿ. ...
READ MORE