ಭಾರತೀಯ ಗಣಿತ ಶಾಸ್ತ್ರ ಹಾಗೂ ಶಾಸ್ತ್ರಜ್ಞರ ಚರಿತ್ರೆ ಸಂಶೋಧನಾ ಬರಹದ ಪುಸ್ತಕವನ್ನು ಲೇಖಕ ವೇಣುಗೋಪಾಲ ಹೇರೂರ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ತತ್ತ್ವಶಾಸ್ತ್ರ ಮೊದಲಾದ ಕ್ಷೇತ್ರಗಳಲ್ಲಿ ಭಾರತೀಯರ ಸಾಧನೆ ಸುಪರಿಚಿತ. ಅದರಂತೆ ಅಂಕಗಣಿತ, ಕ್ಷೇತ್ರಗಣಿತ (ಜ್ಯಾಮಿತಿ), ತ್ರಿಕೋನಮಿತಿಶಾಸ್ತ್ರ ಮೊದಲಾದವುಗಳ ಬಳಕೆ ಭಾರತೀಯ ನಾಗರಿಕತೆಯ ವಿಕಾಸಕ್ಕೆ ಅಡಿಪಾಯ ಒದಗಿಸಿತ್ತು. ದಿಗ್ದರ್ಶನ ಮಾತ್ರದ ಈ ಗ್ರಂಥದಲ್ಲಿ ಕಾಲಾನುಕ್ರಮದಲ್ಲಿ ಭಾರತೀಯ ಗಣಿತಶಾಸ್ತ್ರದ ವಿಕಾಸದ ಹಂತಗಳನ್ನು ಪರಿಚಯ ಮಾಡಿಕೊಡಲಾಗಿದೆ. ನಿರೂಪಣೆಯ ಜೊತೆಜೊತೆಗೇ ಸಂಸ್ಕೃತ ಮೂಲಗಳನ್ನೂ ಉಲ್ಲೇಖಿಸಲಾಗಿದೆ. ಅಲ್ಲದೇ ಶಾಸ್ತ್ರಗ್ರಂಥಗಳ ಕುರಿತ ಶೋಧಕಾಂಗ ಇದೀಗ ಯಾವ ಹಂತ ತಲಪಿದೆ ಎಂಬುದನ್ನೂ ಅಲ್ಲಲ್ಲಿ ನಿರ್ದೇಶಿಸಲಾಗಿದೆ. ಈ ಹಿಂದೆಯೇ ಭಾರತೀಯ ಗಣಿತಶಾಸ್ತ್ರದ ಬೆಳವಣಿಗೆಯನ್ನು ಕುರಿತು ಶೋಧಮಾಡಿರುವ ಮಹನೀಯರ ಗ್ರಂಥಗಳಲ್ಲಿನ ಮಾಹಿತಿಗೆ ಗಮನ ಸೆಳೆಯಲಾಗಿದೆ. ಹೀಗೆ ಸಾಮಾನ್ಯರಿಗೆ ಮಾತ್ರವಲ್ಲದೇ ಈ ದಿಶೆಯಲ್ಲಿ ಅಧ್ಯಯನ-ಶೋಧನೆ ಮಾಡಬಯಸುವವರಿಗೂ ಉಪಯುಕ್ತವಾಗುವ ಮಾಹಿತಿ ಈ ಗ್ರಂಥದಲ್ಲಿದೆ.
©2024 Book Brahma Private Limited.