ಸಿದ್ಧಮಂಕ ಚರಿತೆಯ ಕೃತಿಕಾರ ಯಾರೆಂಬುದು ಸ್ಪಷ್ಟವಾಗಿಲ್ಲವಾದರೂ ಡಿ.ಎಲ್. ನರಸಿಂಹಾಚಾರ್ಯರು ಸಿದ್ದಯನೇ ಇದರ ಕರ್ತೃ ಇರಬೇಕೆಂದು ಊಹಿಸಿದ್ದಾರೆ. ಇದು ಹದಿನೇಳನೇ ಶತಮಾನಕ್ಕೆ ಸೇರಿರಬಹುದು ಎಂದು ಛಂದಸ್ಸು ಭಾಷೆ ಬಳಕೆಯನ್ನು ಆಧರಿಸಿ ಅವರು ಹೇಳಿದ್ದಾರೆ. ಒಂದು ವೇಳೆ ಇದು ನಿಜವಾದರೆ ಹಾಲುಮತ ಕುರಿತ ಮೊದಲ ಪುರಾಣ ಇದಾಗಬಹುದು ಎನ್ನುತ್ತಾರೆ ಡಾ. ಎಂ.ಎಂ. ಕಲಬುರ್ಗಿ.
ಅಲ್ಲಮಪ್ರಭು ಮತ್ತು ಸಿದ್ದರಾಮರಿಂದ ಪ್ರೇರಿತಗೊಂಡು ಮಂಕಯ್ಯ ಸಿದ್ಧಪಂಥದಿಂದ ಶರಣಪಂಥಕ್ಕೆ ಹೊರಳಿದ ಕತೆಯನ್ನು ಇದು ಒಳಗೊಂಡಿದೆ. ಭಕ್ತನೊಬ್ಬ ಭಂಡಾರ ಸಂಸ್ಕೃತಿಯಿಂದ ವಿಭೂತಿ ಸಂಸ್ಕೃತಿಗೆ ಹೊರಳಿದುದನ್ನು ಕೃತಿ ವಿವರಿಸುತ್ತದೆ. ಈ ಕಾವ್ಯ ನಾಲ್ಕು ಸಂಧಿಗಳನ್ನು ಒಳಗೊಂಡಿದ್ದು , ನಾಲ್ಕನೇ ಸಂಧಿ ಗಾತ್ರದಲ್ಲಿ ದೊಡ್ಡದು.
©2024 Book Brahma Private Limited.