`ಸಂಪಾದಕರ ಸದ್ಯಶೋಧನೆ-4’ ವಿಶ್ವೇಶ್ವರ ಭಟ್ ಅವರ ಕೃತಿಯಾಗಿದೆ. ಇದಕ್ಕೆ ಲೇಖಕರ ಬೆನ್ನುಡಿ ಬರಹವಿದೆ; ಪತ್ರಿಕೆಗೆ ನಿತ್ಯವೂ ಅಂಕಣ ಬರೆಯುವುದು ಕಷ್ಟ ಬಹಳ ಬೇಗ ಬರಿದಾಗಿಬಿಡುತ್ತೇವೆ. ಅದರಲ್ಲೂ ವಾರಕ್ಕೆ ಮೂರ್ನಾಲ್ಕು ಬೇರೆ ಅಂಕಣಗಳನ್ನಿಟ್ಟುಕೊಂಡು, ದೈನಂದಿನ ಅಂಕಣಕ್ಕೆ ಸಜ್ಜಾಗುವುದು ಕಷ್ಟವೇ. ತುಂಬಿಕೊಳ್ಳಲು ಅವಕಾಶವಿಲ್ಲದಿದ್ದರೆ, ಬರಿದಾಗುವುದೊಂದೇ ಅಲ್ಲ, ಬಹುಬೇಗ ಬರಡೂ ಆಗಿಬಿಡುತ್ತೇವೆ. 'ಸಂಪಾದಕರ ಸದ್ಯಶೋಧನೆ' ಅಂಕಣವನ್ನು ಆರಂಭಿಸುವಾಗ ನನಗೆ ಈ ಆತಂಕವಿತ್ತು. ಯಾವ ಬ್ಯಾಟರ್ ಕೂಡ ಮೈದಾನಕ್ಕಿಳಿಯುವಾಗ ತ್ರಿಬಲ್ ಸೆಂಚುರಿ ಹೊಡೆಯುತ್ತೇನೆ ಎಂದು ಅಂದುಕೊಂಡಿರುವುದಿಲ್ಲ. ಆದರೆ ಆಟದ ಗತಿ, ಸನ್ನಿವೇಶ, ಮನಸ್ಥಿತಿ ಆತನನ್ನು ಆ ಸಾಹಸ-ಸಾಧನೆಗೆ ಪ್ರೇರೇಪಿಸಿ ಅಣಿಗೊಳಿಸುತ್ತದೆ. ಈ ಅಂಶವನ್ನು ಗಮನಿಸಿಯೇ ನಾನು 'ಸದ್ಯಶೋಧನೆ'ಯನ್ನು ಮೈ ಮೇಲೆ ಎಳೆದುಕೊಂಡೆ. ಈಗಿರುವ ಅಂಕಣಗಳು ಸಾಲದು ಎಂಬಂತೆ, ದೈನಂದಿನ ಅಂಕಣವನ್ನೂ ಸುತ್ತಿಕೊಂಡೆ. 'ಸದ್ಯಶೋಧನೆ' ಆರಂಭಿಸಿದ್ದರಿಂದ ಮತ್ತಷ್ಟು ಹೊರೆಯಾಗಬಹುದೆಂಬ ನನ್ನ ದುಗುಡ ಶೀಘ್ರ ನಿವಾರಣೆಯಾಯಿತು. ಆ ನೆಪದಲ್ಲಿ ನಾನು ಮತ್ತಷ್ಟು ಅಕ್ಷರಮುಖಿಯಾದೆ. ಓದುವವರು ಹೆಚ್ಚು ಓದಿದರೆ, ಬರೆಯುವವರು ಇನ್ನೂ ಹೆಚ್ಚು ಬರೆದರೆ ಚೆಂದವಲ್ಲವೇ? 'ಸದೃಶೋಧನೆ'ಗೆ ನಿಲುಕದ ವಸ್ತುಗಳಿಲ್ಲ. ಇದೊಂಥರಾ ಗಜಭೋಜನ ಹಾಗೂ ಎಲ್ಲ ಫಾರ್ಮ್ಯಾಟುಗಳಲ್ಲೂ ಕ್ರಿಕೆಟ್ ಆಡಿದಂತೆ! ಬರೆದು, ಬರೆದು ಅಕ್ಷರಗಳಲ್ಲಿ ಮತ್ತಷ್ಟು ಭರವಸೆ ತುಂಬಿಕೊಳ್ಳಬಹುದು ಎಂಬುದು ನನ್ನ ಸದ್ಯದ ಶೋಧನೆ! ಉಳಿದಿದ್ದನ್ನು ನೀವೇ ಹೇಳಬೇಕು.
ವಿಶ್ವೇಶ್ವರ ಭಟ್ ಅವರು ಉತ್ತರಕನ್ನಡ ಜಿಲ್ಲೆಯ ಕುಮಟಾದ ಮೂರೂರಿನವರು. ಓದಿದ್ದು ಎಂ.ಎಸ್ಸಿ. ಹಾಗೂ ಎಂ.ಎ. ನಾಲ್ಕು ಚಿನ್ನದ ಪದಕ ವಿಜೇತರು, ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ, ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭ, ವಿಜಯ ಕರ್ನಾಟಕ, ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಚಾನಲ್‌ನ ಪ್ರಧಾನ ಸಂಪಾದಕ, ಏಷಿಯನ್ ಕಾಲೇಜ್ ಆಫ್ ಜರ್ನಲಿಸಮ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್, ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ, “ವಿಶ್ವವಾಣಿ' ದಿನಪತ್ರಿಕೆಯ ಪ್ರಧಾನ ಸಂಪಾದಕರು. 'ನೂರೆಂಟು ವಿಶ್ವ, 'ಇದೇ ಅಂತರಂಗ ಸುದ್ದಿ' ...
READ MORE