ಡಾ. ಕಲಬುರ್ಗಿ ಮತ್ತು ಪಿ.ಕೆ.ರಾಠೋಡ ಅವರ ನೇತೃತ್ವದಲ್ಲಿ ಸಂಪಾದನೆಗೊಂಡ ಕೃತಿ ಜಗದ್ಗುರು ತೋಂಡದಾರ್ಯ ಮಠದ ಪರಂಪರೆಯನ್ನು ಸಾರಿ ಹೇಳುತ್ತದೆ. ಎಡೆಯೂರು ಸಿದ್ಧಲಿಂಗೇಶ್ವರರು ಮೊದಲು ಪೀಠಾಧ್ಯಾಕ್ಷರಾಗಿದ್ದ, ಅಧ್ಯಾತ್ಮಿಕ ನೆಲೆಯಲ್ಲಿಯೂ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿಯೂ ನಾಡಿನ ಪ್ರಮುಖ ಧಾರ್ಮಿಕ ಸಂಸ್ಥೆ ಇದು. ಮಠದ ದೊಡ್ಡ ಹಸ್ತಪ್ರತಿ ಭಂಡಾರ, ಪೂರ್ವದ ಜಗದ್ಗುರುಗಳಿಗೆ ದಾನ-ದತ್ತಿ ಇನಾಮುಗಳ ರೂಪದಲ್ಲಿ ಬಂದ ಕಾಗದ ಪತ್ರಗಳು, ಕೆಳದಿ ಶಾಸನ ಪತ್ರ, ಬೀಳಗಿ ಮತ್ತು ಬಾಗಳಿ ಅರಸರ ಪತ್ರ, ದೇಸಾಯರ ಪತ್ರ, ಗೌಡ-ಕುಲಕರ್ಣಿ ಪತ್ರ, ವಿಶೇಷ ಪತ್ರಗಳು ಸೇರಿದಂತೆ ಪ್ರಾಚೀನ ೮೯ ಕಾಗದಪತ್ರಗಳನ್ನು ಪರಿಶೀಲಿಸಿ ಕೃತಿ ಸಿದ್ಧಗೊಂಡಿದೆ.
©2024 Book Brahma Private Limited.