ಕುರುಬಕುಲದಲ್ಲಿ ಜನಿಸಿದ ರೇವಣಸಿದ್ಧನನ್ನೇ ಕಾಲಾಂತರದಲ್ಲಿ ರೇಣುಕ, ಆದಿರೇಣುಕ, ರೇಣುಕಾಚಾರ್ಯ, ರೇವಣಾರಾಧ್ಯ ಮುಂತಾಗಿ ಕರೆಯಲಾಯಿತು ಎಂಬ ಅಭಿಪ್ರಾಯ ಲೇಖಕರದು. ಕುರುಬರ ಕುಲಗುರು ವಡೆಯರೇ ಇಂದಿನ ಜಂಗಮರು ಎನ್ನುವ ಅವರು ಇಂದಿನ ಪಂಚಾಚಾರ್ಯರಿಗೆ ಕೇವಲ 200 ವರ್ಷಗಳ ಇತಿಹಾಸವಿದೆ ಎಂದು ಅಭಿಪ್ರಾಯ ಪಡುತ್ತಾರೆ. ಪಂಚಾಚಾರ್ಯರ ಮಠಗಳು ಮೂಲದಲ್ಲಿ ಕುರುಬರ ಕುಲಗುರು ವಡೆಯರಿಗೆ ಸೇರಿದ್ದವು ಎಂದು ಈ ಕೃತಿಯಲ್ಲಿ ದಾಖಲಿಸಿದ್ದಾರೆ.
ಕುರುಬ ಸಮಾಜದಿಂದ ಬಹಿಷ್ಕರಿಸಲಾದ ವಡೆಯರು ಗುರುಸ್ಥಾನದಿಂದ ವಂಚಿತರಾಗಬೇಕಾಯಿತು. ದಲಿತ ಮೂಲದವರಾದ ಲಿಂಗಾಯತರಿಗೆ ದೀಕ್ಷೆ ಕೊಡುವವರು ಇರಲಿಲ್ಲ. ಆದ್ದರಿಂದ ಕೇವಲ 200 ವರ್ಷಗಳ ಹಿಂದೆ ಇವರಿಬ್ಬರೂ ಒಂದಾರು. ಆಗ ಹುಟ್ಟಿದ್ದೇ ವೀರಶೈವ-ಲಿಂಗಾಯತ ಈ ರೀತಿಯ ವಿವಾದಾಸ್ಪದ ಸಂಗತಿಗಳುಈ ಕೃತಿಯಲ್ಲಿವೆ.
ರೇವಣಸಿದ್ಧ ಕೊಲ್ಲಿಪಾಕಿಯ ಸ್ಥಾವರ ಲಿಂಗದಲ್ಲಿ ಹುಟ್ಟಿಲ್ಲ ಎನ್ನುವ ಲೇಖಕರು ಸಿದ್ಧಾಂತ ಶಿಖಾಮಣಿಯು 19ನೆಯ ಶತಮಾನದಲ್ಲಿ ತೆಲುಗಿನಲ್ಲಿ ಹುಟ್ಟಿದ ಕೃತಿ ಎಂದು ತೀರ್ಪು ನೀಡುತ್ತಾರೆ. ಈ ಕೃತಿಯ ಕರ್ತು ಶಿವಾಚಾರ್ಯನಲ್ಲ ಎನ್ನುವ ಅವರು ರೇಣುಕನು 12ನೆಯ ಶತಮಾನದಲ್ಲಿದ್ದ ಬೇರೊಬ್ಬ ಅಗಸ್ತ್ಯನಿಗೆ ಭೋಧಿಸಿದನು ಎಂದು ವಿವರಿಸುತ್ತಾರೆ. ರೇಣುಕ ಚರಿತ್ರೆಯಲ್ಲಿ ಬರುವ ವಿಭೀಷಣ ರಾವಣನ ಸಹೋದರನಲ್ಲ ಎಂದು ಅಭಿಪ್ರಾಯ ಪಡುವ ಲೇಖಕರು ವೀರಶೈವ ಮತ್ತು ಜಂಗಮ ಪದದ ಪ್ರಾಚೀನತೆ, ರೇವಣಸಿದ್ಧನ ಪವಾಡುಗಳನ್ನು, ರೇವಣಸಿದ್ಧನ ಜನ್ಮಸ್ಥಳ ಮತ್ತು ಕಾಲ, ರೇವಣಸಿದ್ಧನ ಸಮಾಧಿಸ್ಥಳ ಮತ್ತು ಕಾಲವನ್ನು 308 ಶಾಸನ ಆಧರಿಸಿ ಚಾರಿತ್ರಿಕ ಅಂಶಗಳನ್ನು ವಿವರಿಸಲಾಗಿದೆ ಎಂದು ಲೇಖಕರು ತಿಳಿಸುತ್ತಾರೆ. ಕೃತಿಯಲ್ಲಿ ಕ್ಷೇತ್ರಗಳ 16 ಪುಟಗಳಲ್ಲಿ ಬಣ್ಣದ ಚಿತ್ರಗಳನ್ನುನೀಡಲಾಗಿದೆ.
©2024 Book Brahma Private Limited.