ಈ ಪುಸ್ತಕವು ಕನಕದಾಸರ ಕಾವ್ಯವನ್ನೂ ಅವರ ಶಾಸ್ತ್ರ ಮತ್ತು ಲೋಕಾನುಭವವನ್ನೂ ತಿಳಿಯಲು ಹಾಗೂ ತಿಳಿಸಿಕೊಡಲು ಸಹಾಯ ಮಾಡುತ್ತದೆ. ಇಂಥದ್ದೊಂದು ಪುಸ್ತಕ ಕನ್ನಡಕ್ಕೆ ಬೇಕಿತ್ತು. ವಿದ್ವನ್ಮಹನೀಯರಾದ ಕೆ.ಗೋಕುಲನಾಥರು ʼಮೋಹನತರಂಗಿಣಿʼ ಕಾವ್ಯಕ್ಕೂಇದೇ ಬಗೆಯ ಪ್ರತಿಪದಾರ್ಥ ಮತ್ತು ಟಿಪ್ಪಣಿ ರೂಪದ ಬರೆಹವನ್ನು ನೀಡಿದರೆ ವಿದ್ಯಾರ್ಥಿಗಳಿಗೂ, ಕಾವ್ಯಾಸಕ್ತರಿಗೂ ಪ್ರಿಯವಾಗುವುದರಲ್ಲಿ ಸಂದೇಹವಿಲ್ಲ. ಇವು ಹೊರನೋಟಕ್ಕೆ ಮಧ್ಯಕಾಲೀನ ದೇಸಿಕಾವ್ಯಗಳೇನೂ ಸರಿ. ಆದರೆ, ಇಲ್ಲಿ ಬರುವ ವರ್ಣನೆ, ಅಲಂಕಾರ, ಉಕ್ತಿಚಾತುರ್ಯ ಸಂದರ್ಭ ಇವುಗಳನ್ನು ಯಾರೊಬ್ಬರು ಸ್ವತಂತ್ರವಾಗಿ ತಿಳಿಯಲು ಸಾಧ್ಯವಿಲ್ಲ ಎಂಬುದನ್ನು ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ ಮುನ್ನುಡಿ ಬರೆದಿದ್ದಾರೆ.
ಕೆ. ಗೋಕುಲನಾಥ್ ಅವರು ಮೈಸೂರಿನವರು. ಸ್ನಾತಕೋತ್ತರ ಪದವೀಧರರು ದಾಸ ಸಾಹಿತ್ಯದ ಹಿರಿಯ ಸಂಶೋಧಕ. ‘ವಿಜಯದಾಸರ ಜೀವನ ಮತ್ತು ಕೃತಿಗಳ ಸಮೀಕ್ಷೆ’ ಗೋಕುಲನಾಥರ ಪಿಎಚ್.ಡಿ ಅಧ್ಯಯನದ ವಿಷಯ. ದಾಸ ಸಾಹಿತ್ಯದ ದಾಖಲೀಕರಣ ಮತ್ತು ಪ್ರಚಾರವನ್ನೇ ಬದುಕಿನ ಮಾರ್ಗವಾಗಿಸಿ ಕೊಂಡಿರುವರು. .ಆಚಾರ್ಯ ಪಾಠಶಾಲಾ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರು. ದಾಸ ಸಾಹಿತ್ಯ ರಚನೆ, ಪ್ರವಚನ, ಪ್ರಬಂಧ ಮಂಡನೆ, ಉಪನ್ಯಾಸಗಳೇ ಇವರ ಬದುಕಿನ ನಡೆ. 19 ಕೃತಿಗಳನ್ನು ರಚಿಸಿದ್ದು, ರಾಷ್ಟ್ರ-ರಾಜ್ಯ ಮಟ್ಟದ ಸಮ್ಮೇಳನಗಳಲ್ಲಿ 100ಕ್ಕೂ ಅಧಿಕ ಪ್ರಬಂಧಗಳ ಮಂಡಿಸಿದ್ದಾರೆ. ಕೀರ್ತನ ಕಮ್ಮಟಗಳ ಆಯೋಜನೆ, 25ಕ್ಕೂ ಹೆಚ್ಚು ಉಪನ್ಯಾಗಳು, 76 ಪುಸ್ತಕ ವಿಮರ್ಶೆ, ಸಮಗ್ರ ದಾಸಸಾಹಿತ್ಯ ಯೋಜನೆಯ ಸಂಪಾದಕತ್ವದಲ್ಲಿಯೂ ಆಸಕ್ತಿ. ಕೃತಿಗಳು : ...
READ MORE