ಈ ಕೃತಿಯಲ್ಲಿ ಕನ್ನಡ ಸಂಶೋಧನೆಯನ್ನು ಕುರಿತ ಮುಕ್ತ ಹಾಗೂ ಬಹು ಸಾಧ್ಯತೆಗಳ ನೋಟಗಳನ್ನು ನೀಡಲಾಗಿದೆ. ಸಾಹಿತ್ಯ, ಸಂಸ್ಕೃತಿ ಅಧ್ಯಯನದ ವಿಧಾನ, ಸತ್ಯ-ಇವುಗಳನ್ನು ಬದ್ಧ ಆಕೃತಿಗಳಲ್ಲಿ ಪ್ರಭುತ್ವಾತ್ಮಕ ನೆಲೆಯಲ್ಲಿ ಕಾಣುವ ಸಂಪ್ರದಾಯವಾದಿ ದೃಷ್ಟಿಕೋನಕ್ಕೆ ಭಿನ್ನವಾಗಿ ಅದನ್ನು ನಿರಂತರ ಶೋಧದ ಚಲನಶೀಲ ಪ್ರಕ್ರಿಯೆ ಎಂದು ನೋಡುವ ಅನುಭಾವಿ ದೃಷ್ಟಿ ಇಲ್ಲಿ ಪ್ರಧಾನವಾಗಿದೆ. ಮಾಹಿತಿ ಸಂಗ್ರಹ, ಅಧ್ಯಯನ ವಿಶ್ಲೇಷಣೆ, ಫಲಿತ ಎನ್ನುವ ಸಂಶೋಧನಾ ನೆಲೆಗಳನ್ನು ಇಲ್ಲಿ ಮರು ವಿಮರ್ಶೆಗೆ ಒಳಪಡಿಸಲಾಗಿದೆ. ಈ ಕೃತಿ ಹೊಂದಿರುವ ಅಧ್ಯಾಯಗಳೆಂದರೆ: 'ಸಂಸ್ಕೃತಿ': ಹಾಗೆಂದರೇನು?; ಜಾಗತೀಕರಣದ ಚರ್ಚೆ ಸಂಸ್ಕೃತಿ ತಾತ್ತಿಕ ವಿಚಾರನುಡಿಗಟ್ಟಿನಲ್ಲಿ, ಕರ್ನಾಟಕ: ಸಂಸ್ಕೃತಿಯೊ ಸಂಸ್ಕೃತಿಗಳೊ? , 'ಸೃಜನಶೀಲ' ಮತ್ತು 'ಸೃಜನೇತರ'; ಸಂಶೋಧನೆಯಲ್ಲಿ ಬದ್ಧತೆಯ ಪ್ರಶ್ನೆ; ಕನ್ನಡ ಮನಸ್ಸು : ಒಂದು ಟಿಪ್ಪಣಿ , ಭಾಷೆಯ ಪಾವಿತ್ರ್ಯ ರಕ್ಷಣಾ ಸಮಸ್ಯೆ; ಸಮಸೀಕರಣ ಹಾಗೂ ತಾತ್ತೀಕರಣ , ಸಂಶೋಧನೆಯ 'ಸತ್ಯ'ದ ಅಭಿವ್ಯಕ್ತಿ ಮಾಹಿತಿ ಹಾಗೂವಿಶ್ಲೇಷಣೆಯ ರಾಜಕಾರಣ , ಅಧ್ಯಯನ ವಿಧಾನ ಕಂಡುಕೊಳ್ಳುವ ಕಷ್ಟ; ಅನುಭಾವಿಗಳ ಅಧ್ಯಯನದಲ್ಲಿ ತೊಡಕು ,ವೈದಿಕ ವಿರೋಧದ ಸಮಸ್ಯೆ , 'ಪ್ರಾಚೀನ ಕೃತಿಗಳ ಸಾಂಸ್ಕೃತಿಕ ಮುಖಾಮುಖಿ , ಸಮುದಾಯ ಅಧ್ಯಯನದ ಸವಾಲುಗಳು; ಧರ್ಮಗಳ ಅಧ್ಯಯನ: ಹಾದಿ ಯಾವುದು; ಕರ್ನಾಟಕ ಸಮಾಜಶಾಸ್ತ್ರ : ಸಾಹಿತ್ಯದ ಕಣ್ಣಲ್ಲಿ , ಸಂಶೋಧನೆ ಮತ್ತು ಪರಧನ ಸಹಾಯ; ಶಾಸ್ತ್ರದ ಋಣಭಾರ ಇಳಿಸುವ ಬಗೆ; ಆದರ್ಶ ಆಧ್ಯಯನ ವಿಧಾನಗಳು ಇವೆಯೇ?
2007ರಲ್ಲಿ ಮೊದಲ ಮುದ್ರಣ ಆಗಿತ್ತು.
©2024 Book Brahma Private Limited.