ಸಿ.ಪಿ.ನಾಗರಾಜ ಅವರ ಕೃತಿ ಕನ್ನಡ ಬಯ್ಗುಳ ಓದು. ಕೆ.ವಿ.ನಾರಾಯಣ ಅವರು ಈ ಕೃತಿಯಲ್ಲಿ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರ ಮಾತುಗಳಲ್ಲಿ, ‘ಈ ಹೊತ್ತಗೆಯಲ್ಲಿ ಬಯ್ದುಳವನ್ನು ಜನರು ಬಳಸುವುದೇಕೆ ಎನ್ನುವುದನ್ನು ವಿವರಿಸಲು ನಾಗರಾಜ್ ಹೆಚ್ಚಾಗಿ ಮಾನಸಿಕ ನೆಲೆಯನ್ನು ಅವಲಂಬಿಸಿದ್ದಾರೆ. ಬಳಸುವ ಸಂದರ್ಭ ಮತ್ತು ಅವುಗಳ ಪರಿಣಾಮಗಳನ್ನು ವಿವರಿಸುವಾಗ ಸಾಮಾಜಿಕ ನೆಲೆಗಳನ್ನು ಹುಡುಕಿ ತೆಗೆದಿದ್ದಾರೆ. ಬಯ್ದುಳದ ತಿರುಳನ್ನು ಕಂಡುಕೊಳ್ಳುವಾಗ ಮತ್ತೆ ಹೆಚ್ಚಾಗಿ ಸಮಾಜ ರಚನೆಯ ಕೆಲವು ಚಹರೆಗಳನ್ನು ಬಳಸಿಕೊಳ್ಳುತ್ತಾರೆ. ಇವಲ್ಲದೆ ಬೇರೆ ದಾರಿಗಳು ಇವೆಯೇ ಎನ್ನುವುದನ್ನು ಮುಂದಿನ ಓದುಗಳು ನಮಗೆ ತೆರೆದು ತೋರಿಸಬೇಕಿದೆ ಎಂಬುದಾಗಿ ಹೇಳಿದ್ದಾರೆ. ಹಿರಿಯ ಪತ್ರಕರ್ತ, ಲೇಖಕ ಸುಗತ ಶ್ರೀನಿವಾಸರಾಜು ಅವರ ಮಾತುಗಳೂ ಈ ಕೃತಿಯ ಪ್ರಾರಂಭದಲ್ಲಿದೆ. ಅವರು ಹೇಳುವಂತೆ, ಬಯ್ದುಳ ಪದಗಳು ಒಂದು ಭಾಷಾ ಸಮುದಾಯದ, ಸಮಾಜದ ಅಳದ ಅಭಿವ್ಯಕ್ತಿ. ಅವು ನಿರಾಕರಣೆಗೆ ಒಳಪಡುತ್ತಲೇ ನಮ್ಮನ್ನು ಆವರಿಸಿಕೊಳ್ಳುತ್ತವೆ. ಸಾಮಾಜಿಕ ಬಳಕೆಯ ವ್ಯಾಪ್ತಿಯಿಂದಾಚೆಗೆ ಈ ಬದ್ಗುಳ ಪದಗಳನ್ನು ಅಂಕಣವಾಗಿ ಪ್ರಯೋಗಿಸುವುದರ ಹಿಂದೆ ಅನೇಕ ವಿಚಾರಗಳು ತಲೆಯಲ್ಲಿ ಸುಳಿದು ಹೋಗಿದ್ದವು. ಒಬ್ಬ ಓದುಗನನ್ನು ಈ ಮೂಲಕ ಮನರಂಜಿಸಬಹುದೇ ? - ಓದುಗರಿಗೆ ಪ್ರತಿದಿನ ಸಣ್ಣ ಅಘಾತ ಉಂಟುಮಾಡಬಹುದೇ ? – ಅವರ ತಾಳ್ಮೆಯ, ಸ್ಮರಣೆಯ ಪರಿಧಿಯನ್ನು ಈ ಮೂಲಕ ಪರೀಕ್ಷಿಸಿ ವಿಸ್ತರಿಸಬಹುದೇ - ಎಂದೆಲ್ಲಾ ಯೋಜಸಿದ್ದವು. “ಮನರಂಜನೆ”–“ಆಘಾತ' ಇತ್ಯಾದಿಗಳ ನಡುವೆ 'ತಾಳ್ಮೆ' ಮತ್ತು 'ಸೈರಣೆ' ಯ ವಿಚಾರ ನನಗೆ ರಾಜಕೀಯ ಪ್ರಶ್ನೆಗಳಾಗಿ ಕಂಡವು. ನಮ್ಮ ಸುತ್ತಅನ ವಾತಾವರಣವನ್ನು ನಾವು “ ಏಕಮುಖಿ” – “ಏಕ ಸಂಸ್ಕೃತಿ' ಮಾಡಹೊರಟು ವಿಕ ಧರ್ಮದತ್ತ ಕೊಂಡೊಯ್ದು ಅದಕ್ಕೆ ಇಲ್ಲಸಲ್ಲದ ಪೊಳ್ಳು ನೈತಿಕ ವಾಗ್ವಾದಗಳನ್ನು ನಮ್ಮ ದಿನಪತ್ರಿಕೆಗಳು ಸೃಷ್ಟಿ ಮಾಡುತ್ತಿದ್ದ ಹೊತ್ತಿನಲ್ಲಿ ; ಜೊತೆಗೆ ನಾವುಗಳು ವೈಯಕ್ತಿಕವಾಗಿ ಒಂದು ಅಪಾಯಕಾರಿ ನೀತಿ ಭ್ರಮೆಗೆ ಬೀಳುತ್ತಿದ್ದಾಗ - ( A dangerous moral imagining of ourselves ) - ಈ ಬಯ್ದುಳ ಪದಗಳು ನಮ್ಮ ವಿಭಿನ್ನತೆ, ನಮ್ಮ ನಿಜಗಣ, ನಮ್ಮ ನಡುವಿನ ಬೆಳಕಾಗಿ ಕಂಡಿದ್ದು ಒಂದು ಸೋಜಿಗ ಎಂದಿದ್ದಾರೆ.
ಬರಹಗಾರ ಸಿ.ಪಿ ನಾಗರಾಜು ಅವರು 1945ರಲ್ಲಿ ಪುಟ್ಟೇಗೌಡ-ಲಕ್ಷ್ಮೀ ದೇವಮ್ಮ ದಂಪತಿಯ ಮಗನಾಗಿ ಜನಿಸಿದರು. ಎಂ.ಎ, ಪಿಎಚ್.ಡಿ ವ್ಯಾಸಂಗ ಮಾಡಿ ಸ್ತುತ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುದ್ರಿತ ನಾಟಕ ಕೃತಿಗಳು: ಭಾಗೀರಥಿ, ಅಂಬೆ, ಹಾವು, ಅಂಗಿಬಟ್ಟೆ, ಒಂದು ರೂಪಾಯಿ, ಕಳ್ಳರಿದ್ದಾರೆ ಎಚ್ಚರಿಕೆ, ಹೆಣದ ಹಣ, ಮೂರು ಸಾಮಾಜಿಕ ನಾಟಕಗಳು. ಮುದ್ರಿತ ಗದ್ಯ ಕೃತಿಗಳು: ಕರಿಯನ ಪುರಾಣ, ಕನಕನ ಅವ್ವ, ಹಳ್ಳಿಗಾಡಿನ ರೂವಾರಿ, ಡಾ.ಬಂದೀಗೌಡ, ಆಣೆ ಪ್ರಮಾಣಗಳು, ಬಯ್ಗುಳ, ಸರ್ವಜ್ಞ ವಚನಗಳ ಓದು, ಅಲ್ಲಮ ವಚನಗಳ ಓದು, ಶಿವಶರಣೆಯರ ವಚನಗಳ ಓದು, ಶಿವಶರಣರ ವಚನಗಳ ಓದು, ಬಸವಣ್ಣನ ...
READ MORE