ಕವಿ-ಪ್ರಾಧ್ಯಾಪಕ ವಿಕ್ರಮ ವಿಸಾಜಿ ಅವರು ಹಿರಿಯ ಕವಿ ಚಂದ್ರಶೇಖರ ಕಂಬಾರ ಅವರ ಕಾವ್ಯದ ಕುರಿತು ನಡೆಸಿದ ಸಂಶೋಧನಾ ಪ್ರಬಂಧ ಇದು. ಪಿಎಚ್.ಡಿ. ಪದವಿಗಾಗಿ ಸಿದ್ಧಪಡಿಸಿದ ಮಹಾಪ್ರಬಂಧ. ಕಂಬಾರರ ಕವಿತೆಗಳ ಮಹತ್ವ, ಕಂಬಾರರ ಕಾವ್ಯದ ಚಲನೆಯ ಸ್ವರೂಪಗಳನ್ನು ಚರ್ಚಿಸಿದ್ದಾರೆ. ಕಂಬಾರರು ಕನ್ನಡದ ಮಹತ್ವದ ಕವಿ ಎಂಬುದರಲ್ಲಿ ಎರಡು ಮಾತಿಲ್ಲ. ಕಂಬಾರರ ಕವಿತೆಗಳ ಸಂಶೋಧನಾತ್ಮಕ ವಿಶ್ಲೇಷಣೆ ಈ ಗ್ರಂಥದಲ್ಲಿದೆ. ವಿಕ್ರಮ ವಿಸಾಜಿ ಅವರ ಓದು-ಗ್ರಹಿಕೆಗಳೆರಡೂ ಕಂಬಾರರ ಕವಿತೆಯ ವಿಶ್ಲೇಷಣೆಯಲ್ಲಿ ನೆರವಾಗಿವೆ. ಕಂಬಾರರ ಕವಿತೆ ಅರ್ಥ ಮಾಡಿಕೊಳ್ಳುವುದಕ್ಕೆ ಈ ಪುಸ್ತಕ ಮಹತ್ವದ್ದು.
ಕಲಬುರ್ಗಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕರಾಗಿರುವ ವಿಕ್ರಮ ವಿಸಾಜಿ ಅವರು ಕವಿ-ವಿಮರ್ಶಕ. ಬೀದರ ಜಿಲ್ಲೆಯ ಭಾಲ್ಕಿಯವರಾದ ವಿಕ್ರಮ ಅವರ ತಂದೆ ಹೆಸರಾಂತ ಕವಿ-ಲೇಖಕರು. ಬಾಲ್ಯದಲ್ಲಿಯೇ ಕವಿತೆ ಬರೆಯುವುದನ್ನು ಆರಂಭಿಸಿದ ವಿಕ್ರಮ ಅವರು ಹೈಸ್ಕೂಲಿನಲ್ಲಿದ್ದಾಗಲೇ ಕವನ ಸಂಕಲನ ಪ್ರಕಟಿಸಿದ್ದರು. ಕಲಬುರ್ಗಿಯ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಎಂ.ಎ) ಪದವಿ ಪಡೆದ ಅವರು ಕಂಬಾರರ ಕಾವ್ಯದ ಮೇಲೆ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿ ಸೊಂಡೂರು, ರಾಯಚೂರು ಸ್ನಾತಕೋತ್ತರ ಕೇಂದ್ರಗಳಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ...
READ MORE