'ಕತೆಯಾದಳು ಹುಡುಗಿ' ಕೃತಿಯು ಸ್ತ್ರೀ ವಿಮೋಚನೆಯ ಸಾಮಾಜಿಕ, ಆರ್ಥಿಕ, ರಾಜಕೀಯ ಆಯಾಮಗಳನ್ನು ಸ್ತ್ರೀವಾದಿ ಸಾಹಿತ್ಯ ಮತ್ತು ಸಂಸ್ಕೃತಿಯ ಮೀಮಾಂಸೆಯೊಂದಿಗೆ ಕನ್ನಡ ಕಥನ ಸಾಹಿತ್ಯದಲ್ಲಿ ಸ್ತ್ರೀ ನಿರ್ವಚನ ಅನಾವರಣಗೊಂಡ ರೀತಿಯನ್ನು ತೆರೆದಿಡುವ ಪ್ರಯತ್ನವಾಗಿದೆ. ಸಂಶೋಧನೆಯ ಪೂರ್ವಬಂಧದ ಚೌಕಟ್ಟಿನೊಳಗೆ ಶತಮಾನದ ಕಥಾ ಸಾಹಿತ್ಯವನ್ನು ಇಲ್ಲಿ ಅವಲೋಕಿಸಲಾಗಿದೆ. ಕನ್ನಡ ಸಾಹಿತ್ಯ ಪ್ರಕಾರದಲ್ಲಿ ಪ್ರಮುಖವಾದ ಕಥಾ ಪ್ರಕಾರ ಕುರಿತು ಲೇಖಕಿ ಗೀತಾ ಶೆಣೈ ನಡೆಸಿದ ಸಂಶೋಧನೆಯ ಪೂರ್ಣ ಮಾಹಿತಿ ಈ ಕೃತಿಯಲ್ಲಿದೆ.
©2024 Book Brahma Private Limited.