ಶೆಟ್ಟಿಕೇರಾ ಗ್ರಾಮಾಧ್ಯಯನ ಸಂಶೋಧನಾ ಕೃತಿಯು ಶೆಟ್ಟಿಕೇರ ಗ್ರಾಮದ ಸಮಸ್ಯೆ ಹಾಗೂ ಅದಕ್ಕೆ ಪರಿಹಾರಗಳನ್ನು ಕಂಡುಕೊಳ್ಳುವುದರ ಜೊತೆಗೆ ಸಮಾಜಮುಖಿ ಅಂಶಗಳನ್ನು ತಿಳಿದುಕೊಳ್ಳುವ ಒಂದು ಪ್ರಯತ್ನವಾಗಿದೆ.
ಸರ್ಕಾರದ ಇಂದಿನ ನೀತಿಯಿಂದ ತಳ ಸಮುದಾಯಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳು ವಿದ್ಯಾವಂತರಾಗಲು ಸಹಕಾರಿಯಾಗಿದೆ. ಮೌಢ್ಯಾಚರಣೆಗಳು ಹತೋಟಿಗೆ ಬಂದಿವೆ. ಆದರೆ, ಇವೆಲ್ಲವನ್ನು ಕೂಲಂಕಷವಾಗಿ ಅರಿಯಲು ಇಂತಹ ಕೃತಿಯು ಅಧ್ಯಯನ ಯೋಗ್ಯ.
ಸಂಶೋಧಕ, ಬರಹಗಾರ ಸಿ.ಆರ್. ಕಂಬಾರ ಶೆಟ್ಟಿಕೇರಾ ಜನಿಸಿದ್ದು 1985 ಆಗಸ್ಟ್ 1ರಂದು ಯಾದಗಿರಿ ಜಿಲ್ಲೆಯ ಶೆಟ್ಟಿಕೇರಾದಲ್ಲಿ. ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಸಮಾಜಕಾರ್ಯದಲ್ಲಿ ಸ್ನಾತಕೋತ್ತರ ಪದವೀಧರರು. ಪ್ರಸ್ತುತ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಅಧ್ಯಯನ ಮಾಡುತ್ತಿದ್ದಾರೆ. ಶೆಟ್ಟಿಕೇರಾ ಗ್ರಾಮಾಧ್ಯಯನ, ಗಿರಿನಾಡು, ಬೀದಿ ಬದುಕು, ಸಾಮಾಜಿಕ ಬಿಕ್ಕಟ್ಟುಗಳು, ಸಮುದಾಯ ಸಂಸ್ಕೃತಿ, ಶೋಧ ಹಾಗೂ ಜಾನಪದ ಸಂಗಮ ಇವರ ಪ್ರಮುಖ ಕೃತಿಗಳು. ಶೆಟ್ಟಿಕೇರಾ ಗ್ರಾಮಾಧ್ಯಯನ ಕೃತಿಗೆ 2017ರ ಕನ್ನಡ ಪುಸ್ತಕ ಪ್ರಾಧಿಕಾರದ ಯುವ ಬರಹಗಾರರ ಪುರಸ್ಕಾರ ದೊರೆತಿದೆ. ...
READ MORE