ಸತ್ತ ಕುರಿಯನ್ನು ಬದುಕಿಸಿದ ಪವಾಡವನ್ನು ಹೇಳುವ ತಗರ ಪವಾಡ ಕುರುಬ ಸಮುದಾಯವನ್ನು ಪ್ರಸ್ತಾಪಿಸುವ ಮತ್ತೊಂದು ಕೃತಿ. ಈ ಪವಾಡದಿಂದಲೇ ಕಲ್ಯಾಣದಿಂದ ಹೊರಗಿದ್ದ ಕುರುಬರು ಒಳಗೆ ಬರುವಂತಾಯಿತು ಎನ್ನುವುದನ್ನು ಹೇಳುತ್ತದೆ.
ಸಿದ್ದಮಂಕ ಚರಿತೆಯೂ ಟಗರನ್ನು ಬದುಕಿಸಿದ ಬಳಿಕ ಕುರುಬನೊಬ್ಬ ಕಲ್ಯಾಣ ಪಟ್ಟಣದಲ್ಲಿ ವಾಸಿಸುವ ಅವಕಾಶ ಪಡೆದು ಕತೆ ಹೇಳುತ್ತದೆ. ಎರಡೂ ಕೃತಿಗಳಲ್ಲಿ ಬರುವ ನಾಯಕರ ಹೆಸರುಗಳು ಬೇರೆ ಬೇರೆ. ತಗರ ಪವಾಡದಲ್ಲಿ ಹೆಗ್ಗ ಗೌಡನ ಪ್ರಸ್ತಾಪವಿದ್ದರೆ ಸಿದ್ದಮಂಕ ಚರಿತ್ರೆಯಲ್ಲಿ ಪದ್ಮಗೊಂಡನ ಹೆಸರಿದೆ.
ಒಂದೇ ಕತೆಯನ್ನು ಭಿನ್ನ ನೆಲೆಯಲ್ಲಿ ಈ ಎರಡೂ ಕೃತಿಗಳು ಮಂಡಿಸುತ್ತವೆ. ತಗರ ಪವಾಡ ಎರಡು ಸುಳಿಗಳಲ್ಲಿ ಲಭಿಸಿದ್ದು ಅದರ ಪೂರ್ಣಪಠ್ಯ ಸಿಕ್ಕಿಲ್ಲ.
©2024 Book Brahma Private Limited.