ಡಾ. ಬಸವರಾಜ ಕಲ್ಗುಡಿ ಅವರು ಬರೆದ ಕೃತಿ-ಅನುಭಾವ; ಸಾಂಸ್ಕೃತಿಕ ಸಮಸ್ತೆ ಮತ್ತು ಹುಡುಕಾಟ. ಈ ಶೀರ್ಷಿಕೆಯ ಕೃತಿಯು ಅವರ ಸಂಶೋಧನಾ ಮಹಾಪ್ರಬಂಧ. ಇಡೀ ಸಂಶೋಧನೆಯನ್ನು ನಾಲ್ಕು ಪ್ರಮುಖ ಭಾಗಗಳಾಗಿ ವಿಭಾಗಿಸಿದ್ದು, 1. ಅಧ್ಯಯನದ ತಾತ್ವಿಕ ಹಿನ್ನೆಲೆ 2. ಮನುಷ್ಯನ ಅಸ್ತಿತ್ವವವನ್ನು ಕುರಿತ ಆಲೋಚನೆಯ ಕ್ರಮಗಳು, 3. ಸಮಾಜದ ಸ್ವರೂಪವನ್ನು ಕುರಿತ ಹಾಗೆ ನಡೆದ ಮಧ್ಯಕಾಲೀನ ಚಿಂತನೆಗಳು ಹಾಗೂ 4. ಕಾಲದ ಗ್ರಹಿಕೆಯ ಸ್ವರೂಪಗಳು ಚಾರಿತ್ರಿಕ ಅರಿವಿನ ಲಕ್ಷಣಗಳು ಇವುಗಳಲ್ಲಿ ರೂಪುಗೊಂಡ ಬಗೆಗಳು.
ಈ ಎಲ್ಲ ಪ್ರಮುಖ ಶೀರ್ಷಿಕೆಗಳಡಿ ಚಾರಿತ್ರಿಕ ಅಧ್ಯಯನದ ನೆಲೆಗಳು, ವೀರಶೈವ ಸಿದ್ಧಾಂತದ ನೆಲೆ ಹಾಗೂ ಚಾರಿತ್ರಿಕ ಪ್ರಜ್ಞೆ, ಧಾರ್ಮಿಕ ಮನುಷ್ಯನ ಸ್ವರೂಪಗಳು, ಭಕ್ತಿ ಪಂಥ ಹಾಗೂ ಅನುಭಾವ ಸ್ವರೂಪಗಳು, ಬಸವಣ್ಣನ ವಚನಗಳಲ್ಲಿ ಮಾನವ ಅಸ್ತಿತ್ವದ ಸ್ವರೂಪಗಳು, ಅಕ್ಕಮಹಾದೇವ: ಪ್ರೇಮ ಮತ್ತು ಕಾಮದ ಸಂಘರ್ಷ ಹಾಗೂ ಅನುಭಾವದ ಆಶಯ, ಅನುಷ್ಯನ ಅಸ್ತಿತ್ವದ ಸ್ವರೂಪ: ಅಲ್ಲಮನ ವಿಚಾರಗಳು, ಹಿಂದೂ ಧರ್ಮದ ಜಾತಿ ವ್ಯವಸ್ಥೆ: ಭಕ್ತಿಪಂಥ, ವಚನ ಚಳವಳಿ, ಅಕ್ಕ ಮಹಾದೇವಿಯ ವಚನಗಳಲ್ಲಿ ಸಮಾಜದ ಸ್ವರೂಪ, ಐತಿಹಾಸಿಕ ಕಾಲದ ಸ್ವರೂಪ ಹಾಗೂ ಬಸವ, ಅಕ್ಕಮಹಾದೇವಿ ಮತ್ತು ಅಲ್ಲಮ ಕಾಲವನ್ನು ಗ್ರಹಿಸಿದ ನೆಲೆಗಳು ಇತ್ಯಾದಿ ವಿಷಯಗಳ ವಿಶ್ಲೇಷಣೆಯನ್ನು ಈ ಕೃತಿ ಒಳಗೊಂಡಿದೆ.
©2024 Book Brahma Private Limited.