ಕನ್ನಡ ಅಧ್ಯಯನಪೀಠದ ಹಸ್ತಪ್ರತಿ ಸೂಚಿ-೭

Author : ವೀರಣ್ಣ ರಾಜೂರ

Pages 328

₹ 72.00




Year of Publication: 1992
Published by: ಪ್ರಸಾರಾಂಗ
Address: ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

Synopsys

ಹಸ್ತಪ್ರತಿ ಅಧ್ಯಯನ, ಕರಾರುವಕ್ಕಾದ ವಿಶ್ಲೇಷಣೆ ಹೇಗಿರಬೇಕು ಎಂಬುದಕ್ಕೆ ಉದಾಹರಣೆ ಎಂಬಂತಿದೆ ಈ ಕೃತಿ. ಡಾ. ಎಂ.ಎಂ. ಕಲಬುರ್ಗಿ ಕೃತಿಯ ಪ್ರಧಾನ ಸಂಪಾದಕರು. ಗ್ರಂಥ ರಚನೆಯಲ್ಲಿ ವೀರಣ್ಣ ರಾಜೂರ ಅವರ ಶ್ರಮವನ್ನೂ ಮರೆಯುವಂತಿಲ್ಲ. ಬಹುತೇಕ ನನೆಗುದಿಗೆ ಬಿದ್ದಿದ್ದ ಹಸ್ತಪ್ರತಿ ಅಧ್ಯಯನ ಕಾರ್ಯಕ್ಕೆ ಮತ್ತೆ ಜೀವ ಒದಗಿಸಿದ ಹಿನ್ನೆಲೆಯೂ ಕೃತಿಗೆ ಇದೆ. ಸಂಸ್ಕೃತ ಹಸ್ತಪ್ರತಿಗಳಿಗೆ ಬದಲು ಕನ್ನಡ ಹಸ್ತಪ್ರತಿಗಳಿಗೆ ಆದ್ಯತೆ ನೀಡಿದ್ದರಿಂದ ೬ರಿಂದ ೧೦ನೇ ಸಂಪುಟದವರೆಗಿನ ಐದು ಸಂಪುಟಗಳು ಮೊದಲು ಪ್ರಕಟಗೊಂಡಿವೆ.

About the Author

ವೀರಣ್ಣ ರಾಜೂರ
(04 June 1947)

ಸಂಶೋಧಕ, ಸಾಹಿತಿ ವೀರಣ್ಣ ರಾಜೂರ ಅವರು ಜನಿಸಿದ್ದು 1946 ಜೂನ್ 4ರಂದು, ಕೊಪ್ಪಳ ಜಿಲ್ಲೆ, ಕುಷ್ಟಗಿ ತಾಲೂಕಿನ ಬೆನಕನಾಳದಲ್ಲಿ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದ ಇವರು ಕರ್ನಾಟಕ ವಿಶ್ವವಿದ್ಯಾಲಯದ ಅಧ್ಯಯನ ಪೀಠದಲ್ಲಿ ಸಹಾಯಕ ಸಂಶೋಧಕರಾಗಿ ಸೇವೆ ಆರಂಭಿಸಿದರು.  ಇವರ ಪ್ರಮುಖ ಕೃತಿಗಳೆಂದರೆ ವಚನ ಅಧ್ಯಯನ, ಸ್ವರವಚನಗಳು, ವಿಚಾರ ಪತ್ನಿಯರು (ಸಂಶೋಧನಾ ಕೃತಿ), ಅವಳೇ ಗಂಡ, ನಾನೆ ಹೆಂಣ್ತಿ, ಲವ್ ಅಂದ್ರೆ ಪ್ರೇಮ (ನಾಟಕಗಳು), ಹಾಲಭಾವಿ ವೀರಭದ್ರಪ್ಪನವರು, ಪಿ.ಬಿ. ಧುತ್ತರಗಿ-ಜೀವನಚರಿತ್ರೆ. ಸಿದ್ಧಲಿಂಗ ಶತಕ, ವಚನಾಮೃತಸಾರ, ವಚನಶಾಸ್ತ್ರ ಸಾರ, ಶಿವಯೋಗ ಪ್ರದೀಪಿಕೆ, ಭಕ್ತ್ಯಾನಂದ ಸುಧಾರ್ಣವ (ಸಂಪಾದಿತ ...

READ MORE

Related Books