ಶ್ರೀರಾಮ ಇಟ್ಟಣ್ಣವರ ಅವರ ಕೃತಿ ಭರಮದೇವರು. ಕರ್ನಾಟಕದ ದೇಶೀ ದೈವಗಳಲ್ಲಿ ಭರಮದೇವ ಒಬ್ಬ. ಆದರೆ ಇವರ ಪೂರ್ಣ ಪ್ರಮಾಣದ ಮಾಹಿತಿ ಲಭ್ಯವಾಗುತ್ತಿರಲಿಲ್ಲ. ಇದನ್ನು ಮನಗಂಡು ಕನ್ನಡದ ಹಿರಿಯ ಜಾನಪದ ತಜ್ಞ ಶ್ರೀರಾಮ ಇಟ್ಟನವರ ಅವರು ಭರಮದೇವರು ಹೆಸರಿನ ಸಂಶೋಧನಾ ಕೃತಿ ರಚಿಸಿದ್ದಾರೆ. ಮೌಖಿಕ ರೂಪದ ಹಾಡು-ಕಥೆಗಳಲ್ಲಿ ಹಾಗೂ ಆರಾಧನೆ-ಆಚರಣೆಗಳಲ್ಲಿ ಭರಮದೇವರ ಕುರಿತು ಅನೇಕ ಮಾಹಿತಿಗಳು ಸಿಗುತ್ತವೆ. ಅವುಗಳ ಸಂಗ್ರಹ ಈ ಕೃತಿಯಲ್ಲಿದೆ.
ಶ್ರೀಕೃಷ್ಣ ಪಾರಿಜಾತ- ಒಂದು ಅಧ್ಯಯನ ಎಂಬ ವಿಷಯದ ಮೇಲೆ ಪಿಎಚ್.ಡಿ . ಪದವಿ ಪಡೆದಿರುವ ಶ್ರೀರಾಮ ಇಟ್ಟಣ್ಣವರ ಅವರು ಬೀಳಗಿಯ ಶ್ರೀಸಿದ್ಧೇಶ್ವರ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಬಯಲಾಟ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾಗಿರುವ ಇಟ್ಟಣ್ಣವರ ಅವರು ಬಯಲಾಟ-ಕೃಷ್ಣ ಪಾರಿಜಾತ ಹಾಗೂ ಜಾನಪದ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಹೊಳಿಸಾಲ ಬಳ್ಳಿ; ಗಾಲಿ ಉಳ್ಳತೈತಿ; ನೂರು ಶಿಶುಗೀತೆಗಳು; ಹಾಡುಣು ಬಾಪ್ರೇಮದ ಪಾಡಾ; ಹೊತ್ತು ಮೂಡುವ ಸಮಯ (ಕಾವ್ಯ), ಪಾರಿಜಾತದವರು (ನಾಟಕ), ಜನಪದ ಪಶುವೈದ್ಯ ಬೀಳಗಿ ಸಿದ್ಧಪ್ಪ; ಕೊಣ್ಣೂರ ಕರಿಸಿದ್ದೇಶ್ವರ ದೇವಸ್ಥಾನ (ಜಾನಪದೀಯ) ಹಲಗಲಿ-ಗ್ರಾಮ ಚಾನಪದ (ಅಧ್ಯಯನ), ಲಾವಣಿ: ಸಣ್ಣಾಟ (ಸಂಶೋಧನೆ) ತಟ್ಟಿ ಚಿನ್ನ-ಸಣ್ಣಾಟ; ...
READ MORE