ಕವಿ ಜಿ.ಎಸ್. ಶಿವರುದ್ರಪ್ಪ ಅವರ ಕೃತಿ ‘ಪಂಪ: ಒಂದು ಅಧ್ಯಯನ’. ಪಂಪನ ಕುರಿತು ನೂರೆಂಟು ಕೃತಿಗಳು ಕನ್ನಡ ಸಾಹಿತ್ಯ ವಲಯವನ್ನು ಆವರಿಸಿಕೊಂಡಿದ್ದರೂ ಮತ್ತೇ ಮತ್ತೆ ಪಂಪ ಹೊಸದಾಗಿಯೇ ವಿಜೃಂಭಿಸುತ್ತಿದ್ದಾನೆ. ಏಕೆ ಎಂಬುದಕ್ಕೆ ಪಂಪನ ಸಾಹಿತ್ಯದ ಸತ್ವವನ್ನು ತಿಳಿಯಬೇಕಾದರೆ ಈ ಕೃತಿಯು ಅಗಾಧ ಆಕರಗಳನ್ನು ಒದಗಿಸುತ್ತದೆ. ಈ ಕಾರಣಕ್ಕೆ ಶಿವರುದ್ರಪ್ಪನವರು ಬರೆದ ‘ಪಂಪ;ಒಂದು ಅಧ್ಯಯನ’ ಕೃತಿಯು ತನ್ನ ಸಂಶೋಧನಾ ಸ್ವರೂಪದೊಂದಿಗೆ ವಿಶಿಷ್ಟ್ಯತೆಯನ್ನು ಕಾಯ್ದುಕೊಂಡಿದೆ.
ಸಮನ್ವಯ ಕವಿಗಳಲ್ಲಿ ಒಬ್ಬರು ಎಂದು ಗುರುತಿಸಲಾಗುವ ಡಾ.ಜಿ.ಎಸ್. ಶಿವರುದ್ರಪ್ಪ ಅವರು ವಿಮರ್ಶಕರಾಗಿಯೂ ಗಣನೀಯ ಸಾಧನೆ ಮಾಡಿದ್ದಾರೆ. ಗದ್ಯ-ಪದ್ಯಗಳೆರಡರಲ್ಲಿಯೂ ಮಾಗಿದ ಪ್ರತಿಭೆ ಅವರದು. ತಂದೆ ಗುಗ್ಗುರಿ ಶಾಂತವೀರಪ್ಪ ಮತ್ತು ತಾಯಿ ವೀರಮ್ಮ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ 1926ರ ಫೆಬ್ರುವರಿ 7ರಂದು ಜನಿಸಿದರು. ಶಾಲಾ ಉಪಾಧ್ಯಾಯರ ಮಗನಾದ ಜಿ.ಎಸ್.ಎಸ್ ಅವರು ಎಸ್.ಎಸ್.ಎಲ್.ಸಿ ಮುಗಿಯುತ್ತಿದ್ದಂತೆಯೇ ಬಡತನದ ಕಾರಣದಿಂದ ಸರಕಾರಿ ನೌಕರಿ ಹಿಡಿಯಬೇಕಾಯಿತು. ಗುಬ್ಬಿ ತಾಲ್ಲೂಕು ಕಚೇರಿಯಲ್ಲಿ ಗುಮಾಸ್ತರಾಗಿ ಸೇರಿದರು. ಆದರೆ ಓದಲೇಬೇಕೆಂಬ ಅದಮ್ಯ ಆಸೆಯಿಂದ ಕೆಲಸಕ್ಕೆ ವಿದಾಯ ಹೇಳಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದನ್ನು ಮುಂದುವರೆಸಿ ಬಿ.ಎ. ಪದವಿ (1949), ಸ್ವರ್ಣಪದಕದೊಂದಿಗೆ ...
READ MORE