ಎಂ.ಎಂ. ಕಲಬುರ್ಗಿ ಅವರು ರಾಜರ ಆಡಳಿತಾವಧಿಯಲ್ಲಿ ಕನ್ನಡ ಅಸ್ಮಿತೆ ಹೇಗಿತ್ತು ಎಂಬುದನ್ನು ಚಿತ್ರಿಸಿರುವ ಕೃತಿ ಇದು. ಒಂದು ವೇಳೆ ಅರಸರಲ್ಲಿ ಕನ್ನಡಪ್ರಜ್ಞೆ ಜಾಗೃತವಾಗಿದ್ದರೆ ಅದು ಬಿರುತ್ತಿದ್ದ ಪರಿಣಾಮಗಳನ್ನು ಕೃತಿ ಅಂದಾಜಿಸುತ್ತದೆ. ಗಂಗರ ಮಂತ್ರಿ ಚಾವುಂಡರಾಯನ ತಮಿಳುಪ್ರೀತಿ , ಹೊಯ್ಸಳರ ಮಂತ್ರಿ ಗಂಗರಾಜನ ಮರಾಠಿಪ್ರೀತಿ , ವಿಷ್ಣುವರ್ಧನನ ತಮಿಳುಮೂಲದ ಶ್ರೀವೈಷ್ಣವ ಮತಾಂತರ , ಕೃಷ್ಣದೇವರಾಯನ ತೆಲುಗು ಭಾಷಾಪ್ರೀತಿ - ಹಂಪಿ ವಿರೂಪಾಕ್ಷನ ಬದಲು ತಿರುಪತಿ ವೆಂಕಟೇಶನ ಭಕ್ತಿ, ಚಿಕ್ಕದೇವರಾಯನು ಶ್ರೀವೈಷ್ಣವನಾಗುವ ಮೂಲಕ ತಮಿಳು ಪ್ರಜೆ-ಭಾಷೆ-ಸಾಹಿತ್ಯಗಳಿಗೆ ತೋರಿದ ಒಲವು ಇವುಗಳು ಕನ್ನಡದ ಮೇಲೆ ಬೀರಿದ ಪ್ರಭಾವ ಎಂತಹುದು ಎಂಬುದರ ವಿಶ್ಲೇಷಣೆ ಇದೆ. ಅಲ್ಲದೆ ತಾಳೀಕೋಟೆ ಕದನದಲ್ಲಿ ಕನ್ನಡಿಗರು ಆದಿಲ್‌ಷಾಹಿ ಸಾಮ್ರಾಜ್ಯದೊಂದಿಗೆ ಕೈಜೋಡಿಸಲು ಕಾರಣವೇನು ಎಂಬ ಸ್ವಾರಸ್ಯಕರ ಅಂಶವೂ ಕೃತಿಯಲ್ಲಿದೆ.
©2024 Book Brahma Private Limited.