ಜನನೇಂದ್ರಿಯಗಳ ಪೂಜೆಯೇ ಇಂದಿನ ಶಿವಲಿಂಗ ಆರಾಧನೆ ಎನ್ನುವ ಲೇಖಕರು ಇಂದಿನ ಲಿಂಗ ಮಂದಿರಲದಲ್ಲಿ ಪ್ರಜೋತ್ಪತ್ತಿಯ ಸಂಕೇತವಾದ ಲೈಂಗಿಕ ಕ್ರಿಯೆಯಲ್ಲಿ ನಿರತವಾಗಿರುವ ಶಿಶ್ನ-ಯೋನಿಗಳ ಮಿಲನಾಕೃತಿಯೇ ದೈವವಿಗ್ರಹ ಎನ್ನುತ್ತರೆ. ವೇದಕಾಲೀನ ಓಂ ಎಂಬುದು ಅಕ್ಷರವಲ್ಲ. ಬದಲಾಗಿ ಅದೊಂದು ಸಂಕೇತಾಕೃತಿ. ’ಓಂ’ದಲ್ಲಿ ಸ್ತ್ರೀ-ಪುರುಷನ ಲೈಂಗಿಕ ಕ್ರಿಯೆ ಸಾಂಕೇತಿಕ ಚಿತ್ರವಿದೆ. ಪ್ರಪಂಚದ ಮೂಲೆ ಮೂಲೆಗಳಲ್ಲಿರುವ ಶಿಶ್ನ-ಯೋನಿ ಶಿಲ್ಪಗಳ ಸು. 100 ರಷ್ಟು ಶಿಲ್ಪಚಿತ್ರಗಳನ್ನು ಲೇಖಕರು ಈ ಕೃತಿಯಲ್ಲಿ ನೀಡಿದ್ದಾರೆ. ಪ್ರಪಂಚದ ದೇವಕಲ್ಪನೆಗೆ ಶಿಶ್ನ-ಯೋನಿಗಳೇ ಮೂಲ. ಮಾನವಜೀವಿಗಳ ದೇವಕಲ್ಪನೆಯಲ್ಲಿ ದೇವಿಕಲ್ಪನೆ ಅತ್ಯಂತ ಪ್ರಾಚೀನವಾದುದು. ಎಲ್ಲ ದೇವಿ ಮಂದಿರಗಳ ಪೀಠ ಯೋನಿಯೆಲ್ಲಿದ್ದು ಅನಂತರ ಶಿಶ್ನ ಪ್ರವೇಶವಾಗಿದೆ. ಶಿಶ್ನ ಆರಾಧನೆಯ ಪ್ರಚಾರದ ಕಾಲದಲ್ಲಿ ಶಿಶ್ನವನ್ನು ಬ್ರಹ್ಮ, ವಿಷ್ಣು, ಮಹೇಶ್ವರಿಗೆ ಹಂಚಿಕೊಡಲಾಗಿದೆ ಎಂದು ಲೇಖಕರು ಬರೆಯತ್ತಾರೆ.
ಸಾಹಿತಿ, ಸಂಶೋಧಕ ಮತ್ತು ಪತ್ರಕರ್ತರಾಗಿರುವ ಚಂದ್ರಕಾಂತ ಬಿಜ್ಜರಗಿ ಅವರು ವಿದ್ಯುನ್ಮಾನ ವ್ಯವಹಾರ ಕ್ಷೇತ್ರದಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜಯಪುರ ನಿವಾಸಿಗಳು. ವಿದ್ಯುನ್ಮಾನ ವಿಷಯದಲ್ಲಿ ಡಿಪ್ಲೋಮಾ ಪಡೆದಿದ್ದಾರೆ. ಜ್ಯೋತಿಷ್ಯ ಶಾಸ್ತ್ರ ಮತ್ತು ಸಮ್ಮೋಹನ ಶಾಸ್ತ್ರದಲ್ಲಿ ಅವರಿಗೆ ವಿಶೇಷ ಆಸಕ್ತಿ. ಅವರು ’ಕುರುಬ ದರ್ಪಣ’ ವಾರಪತ್ರಿಕೆಯ ಸಂಪಾದಕರು. ವಿಜಯಪುರ ಜಿಲ್ಲಾ ಕುರಿ ಸಾಕಾಣಿಕೆ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಮಾಜಿ ಉಪಾಧ್ಯಕ್ಷರು & ಹಾಲಿ ನಿರ್ದೇಶಕರು. ಕನಕದಾಸರ ಕುರಿತ ಸಾಕಷ್ಟು ಬಿಡಿ ಲೇಖನಗಳು ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳಲ್ಲಿ ಮತ್ತು ಸಂಘ-ಸಂಸ್ಥೆಗಳು ಪ್ರಕಟಿಸಿದ ಸ್ಮರಣಸಂಚಿಕೆಗಳಲ್ಲಿ ಪ್ರಕಟವಾಗಿವೆ. ಕೃತಿಗಳು: ಬಳ್ಳಾರಿ ಪಾಳೆಗಾರ ಬಾಲದ ಹನುಮಪ್ಪ ನಾಯಕ, ಕುರುಬರ ಹೆಜ್ಜೆಗಳು, ಜ್ಯೋರ್ತಿವಿಜ್ಞಾನ, ವಿಜಯನಗರ ಸಾಮ್ರಾಜ್ಯ, ...
READ MORE