‘ದೇವರ ದಾಸಿಮಯ್ಯ ಮರುಚಿಂತನೆ ಸಮಾಜ ಮತ್ತು ಸಂಸ್ಕೃತಿ’ ಕೃತಿಯು ವಾಸುದೇವ ಬಡಿಗೇರ ಅವರ ಸಂಶೋಧನಾತ್ಮಕ ಲೇಖನಸಂಕಲನವಾಗಿದೆ. ಈ ಕೃತಿಯ ಪ್ರಸ್ತಾವನೆಯು ವಚನ ಚಳುವಳಿಯ ಪೂರ್ವ ಕರ್ನಾಟಕದ ಶೈವ ಮತ, ಕಾಳಾಮುಖ, ಪಾಶುಪತ ಮತ್ತು ಸ್ಥಾನಾಚಾರ್ಯರು, ವಚನ ಸಾಹಿತ್ಯ ಮತ್ತು ಶಿವಶರಣರ ಚರಿತ್ರೆಯ ಅಧ್ಯಯನಗಳು(19-20)ನೆಯ ಶತಮಾನ, ಪುರಾಣ- ಕಾವ್ಯಗಳು ಮತ್ತು ದೇವರ ದಾಸಿಮಯ್ಯ ವಿಭಾಗದಲ್ಲಿ ಘಟಸರ್ಪ ಪವಾಡ, ತವನಿಧಿ ಪವಾಡ, ದುಗ್ಗಳೆದ- ದಾಸಿಮಯ್ಯರ ವಿವಾಹ, ದೇವರ ಪದಕ್ಕೆ ಅರ್ಥ, ದೇವರ ದಾಸಿಮಯ್ಯನ ಊರು, ಜೇಡರ ದಾಸಿಮಯ್ಯ, ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ ಏಕ ವ್ಯಕ್ತಿಯೋ ಅಥವಾ ಉಭಯರೋ? ಎನ್ನುವ ವಿಚಾರಗಳನ್ನು ಒಳಗೊಂಡಿದೆ. ಪುರಾತತ್ತ್ವ ಮತ್ತು ದೇವರ ದಾಸಿಮಯ್ಯ ವಿಭಾಗದಲ್ಲಿ ಉತ್ತರನಾಥ(ಉತ್ತರೇಶ್ವರ), ರಾಮನಾಥ(ರಾಮೇಶ್ವರ), ರಾಮತೀರ್ಥದ ಪ್ರಾಚೀನತೆ, ಮುದನೂರಿನ ರಾಮನಾಥ, ಜಡೆಯ ಶಂಕರದೇವ, ಕಲ್ಯಾಣ ಚಾಳುಕ್ಯ ಚಕ್ರವರ್ತಿ ಇಮ್ಮಡಿ ಜಯಸಿಂಹ, ಜಯಸಿಂಹನ ರಾಣಿ ಸುಗ್ಗಲದೇವಿ, ದೇವರ ದಾಸಿಮಯ್ಯ, ಪೊಟ್ಟಳಕೆರೆ ಇವುಗಳನ್ನು ಒಳಗೊಂಡಿದೆ. ಹೀಗೆ ಇಲ್ಲಿ ಅನೇಕ ವಿಚಾರಗಳು ಪ್ರಸ್ತಾಪಗೊಂಡಿರುತ್ತದೆ.
ಲೇಖಕ ವಾಸುದೇವ ಬಡಿಗೇರ ಅವರು ಮೂಲತಃ ಹೊಸಪೇಟೆಯವರು. 1968 ಜೂನ್ 1ರಂದು ಜನನ. ಅವರು ಎಂ.ಎ.(ಪ್ರಾಚೀನ ಭಾರತೀಯ ಇತಿಹಾಸ ಮತ್ತು ಶಾಸನಶಾಸ್ತ್ರ), ಎಂ.ಎ. (ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ್ಫ) ಎಂ.ಫಿಲ್., ಪಿಎಚ್.ಡಿ., ಡಿಪ್ಲೊಮಾ ಇನ್ ಎಪಿಗ್ರಫಿ ವಿದ್ಯಾರ್ಹತೆಯನ್ನು ಹೊಂದಿದ್ದಾರೆ. ಇತಿಹಾಸ, ಪುರಾತತ್ವಶಾಸ್ತ್ರ, ಸಂಸ್ಕೃತಿ ಕಲೆ ಮತ್ತು ವಾಸ್ತು ಶಿಲ್ಪ ಅವರ ಆಸಕ್ತಿಯ ಅಧ್ಯಯನ ಕ್ಷೇತ್ರಗಳಾಗಿವೆ. ಕೃತಿಗಳು: ಸಂಡೂರು ಪರಿಸರದ ಕಾರ್ತಿಕೇಯ ತಪೋವನ, ಶಿರಸಂಗಿ ಕಾಳಮ್ಮ, ಕರ್ನಾಟಕ ದೇವಾಲಯ ಕೋಶ ವಿಜಾಪುರ ಜಿಲ್ಲೆ, ಕರ್ನಾಟಕ ದೇವಾಲಯ ಕೋಶ ಬಳ್ಳಾರಿ ಜಿಲ್ಲೆ, ಸ್ಥಳೀಯ ಚರಿತ್ರೆ ಮತ್ತು ಪುರಾತತ್ವ ಮಾಲೆ-೫ ಬಸವನ ಬಾಗೇವಾಡಿ, ಬಳ್ಳಾರಿ ಜಿಲ್ಲೆಯ ಸಾಂಸ್ಕೃತಿಕ ಪರಂಪರೆ ಭಾಗ-೧, ಕರ್ನಾಟಕ ದೇವಾಲಯ ಕೋಶ : ...
READ MORE