ಡಾ. ಚಂದ್ರಶೇಖರ ಕಂಬಾರರ ನಾಟಕಗಳು ಎಂಬ ಸಂಶೋಧನ ಕೃತಿಯು ಒಂದು ಅಪರೂಪದ ಆಕರ ಗ್ರಂಥವಾಗಿದೆ. ಇದು ಕೇವಲ ಕಂಬಾರರ ನಾಟಕಗಳನ್ನಷ್ಟೇ ಪರಿಚಯಿಸುವದಿಲ್ಲ, ನಾಟಕ ಸಾಹಿತ್ಯ, ನಾಟಕ ರಂಗ, ರಂಗಸಜ್ಜಿಕೆ, ರಂಗಸಂಗೀತ, ರಂಗ ಪ್ರಸಾಧನ ಮುಂತಾದವುಗಳನ್ನು ಪರಿಚಯಿಸುತ್ತದೆ. ಕಂಬಾರರ ನಾಟಕಗಳಲ್ಲಿ ಕಂಡುಬರುವ ಸಂಕೀರ್ಣ ಭಾವನೆಯನ್ನು ಖಾನಬುಡೆ ಅವರು ಅತ್ಯಂತ ಸೂಕ್ಷ್ಮ ವಾಗಿ ಗುರುತಿಸಿ ಉದಾಹರಣೆ ಸಹಿತ ಉಲ್ಲೇಖಿಸಿದ್ದಾರೆ. ಅಲ್ಲದೆ ಅವರ ಬಾಲ್ಯ ಕಾಲದಲ್ಲಿ ಜಾತ್ರೆಗೆ ಬರುತ್ತಿದ್ದ ಪಾರಿಜಾತ ತಂಡಗಳನ್ನು ಕುರಿತು ಪ್ರಸ್ತಾಪಿಸಿದ್ದಾರೆ.ಹೀಗಾಗಿ ಮುಂಬರುವ ದಿನಗಳಲ್ಲಿ ರಂಗಭೂಮಿ ಕುರಿತು ಅಭ್ಯಸಿಸುವ ವಿದ್ಯಾರ್ಥಿಗಳಿಗೆ ಇದೊಂದು ಮಾಹಿತಿ ನೀಡುವ ಪರಿಪೂರ್ಣ ಕೃತಿಯಾಗುವುದರಲ್ಲಿ ಯಾವ ಸಂಶಯವೂ ಇಲ್ಲ.
ಸುಖದೇವ ಎಂ.ಪಾನಬುಡೆ ಅವರು ಬೆಳಗಾವಿ ಜಿಲ್ಲೆಯ ಬಾಡತಾಲೂಕಿನ ಹುಕ್ಕೇರಿಯಲ್ಲಿ ಜನಿಸಿದವರು. ಕರೋಶಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಬೆಳಗಾವಿಯ ಚಿಕ್ಕೋಡಿಯಲ್ಲಿ ಕೆ.ಎಲ್.ಇ.ಸಂಸ್ಥೆಯ ಬಸವಪ್ರಭು ಕೋರೆ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕನ್ನಡ ಸಹ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕೃತಿಗಳು: ಡಾ. ಚಂದ್ರಶೇಖರ ಕಂಬಾರರ ನಾಟಕಗಳು ...
READ MORE