ಕನಕದಾಸರು ವಿವಿಧ ಕ್ಷೇತ್ರಗಳನ್ನು ಭೇಟಿ ನೀಡಿದ ಸಂದರ್ಭ ಅಲ್ಲಿ ನಡೆದ ಅನೇಕ ಪವಾಡ ಸದೃಶ್ಯವಾದ ಘಟನೆಗಳ ಕುರಿತಂತೆ ವಿಚಾರವನ್ನು ಕಟ್ಟಿಕೊಡುವ ಕೃತಿ ಜಗನ್ನಾಥ ಆರ್. ಗೇನಣ್ಣವರ ‘ಸಂತ ಶ್ರೀಕನಕದಾಸರ ಜೀವನ ಸಂದೇಶ’. ಸಂತ ಶ್ರೀ ಕನಕದಾಸರ ಜೀವನ, ಕನಕದಾಸರ ಮತ, ಕನಕದಾಸರ ಸಾಹಿತ್ಯ, ರಾಮಧಾನ್ಯ ಚರಿತೆ, ನಳ ಚರಿತ್ರೆ, ಮೋಹನ ತರಂಗಿಣಿ, ಕೀರ್ತನೆ, ಮುಂಡಿಗೆಗಳು, ಉಗಾಭೋಗ, ಸಮಾಜ ಚಿಂತನೆ: ನೀತಿ ಭೋದನೆ, ವೈಚಾರಿಕತೆ, ಕನಕದಾಸರ ಪಾರಂಪರಿಕ ಸ್ಥಳಗಳು, ಜೈಪುರ, ಪಾಂಢರಪುರ, ಈಗಿನ ನವಗ್ರಹ ಕಿಂಡಿಯೇ ಕನಕ ಕಿಂಡಿ ಹೊರಗಿನ ಕನಕನ ಕಿಂಡಿ ಅಷ್ಟಮಠಾಧೀಶರ ಹುಂಡಿ, ಕನ್ನಡ ಸಾಹಿತ್ಯಕ್ಕೆ ಕನಕದಾಸರ ಕೊಡುಗೆ, ಆಕರ ಗ್ರಂಥಗಳ ವಿಚಾರಗಳನ್ನು ಇಲ್ಲಿ ಕಾಣಬಹುದು. ವಿಮರ್ಶೆಯ ಜಾಡನ್ನು ಹಿಡಿಯದೆ ಜನಸಾಮಾನ್ಯರಿಗೆ ಅರ್ಥವಾಗುವಂತೆ ಒಂದು ರೀತಿ ಕತೆಯ ರೂಪದಲ್ಲಿ ಈ ಕೃತಿಯನ್ನು ರಚಿಸಲಾಗಿದೆ. ಕನಕದಾಸರು, ತಿರುಪತಿ, ಬೇಲೂರು, ಉಡುಪಿ, ಮೇಲುಕೋಟೆ, ಶ್ರೀರಂಗಪಟ್ಟಣ ಬಿಳಿರಂಗಿನ ಕ್ಷೇತ್ರಗಳನ್ನು ದರ್ಶಿಸಿ ಕೀರ್ತನೆಗಳಲ್ಲಿ ವರ್ಣಿಸಿದ್ದಾರೆ.
ಲೇಖಕ ಜಗನ್ನಾಥ ಆರ್. ಗೇನಣ್ಣವರ ಅವರು ಮೂಲತಃ ಹಾವೇರಿ ಜಿಲ್ಲೆಯ ಕಾಗಿನೆಲೆಯವರು. ಪ್ರಸ್ತುತ ಕಾಗಿನೆಲೆ ಅಭಿವೃದ್ದಿ ಪ್ರಾಧಿಕಾರದ ಸಹಾಯಕ ಸಂಶೋಧಕ ಹಾಗೂ ಗ್ರಂಥಪಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು: ಕನಕದಾಸರ ಸಾಹಿತ್ಯ ದರ್ಶನ, ಸಂತ ಶ್ರೀ ಕನಕದಾಸರ ಜೀವನ ಸಂದೇಶ, ಕನಕ ಕೀರ್ತನ ಕೌಸ್ತುಭ ...
READ MORE