ಕ್ರಿ.ಶ 1824ರಲ್ಲಿ ತರುಣನಾಗಿದ್ದಾಗಲೇ ಇಂಗ್ಲೆಂಡಿನಿಂದ ಭಾರತಕ್ಕೆ ಬಂದ ಮೆಡೋಸ ಟೇಲರ್ ಮೂವತ್ತೈದು ವರ್ಷಗಳ ಕಾಲ ಭಾರತದಲ್ಲಿದ್ದವನು. ರಾಜಕೀಯ ಪ್ರತಿನಿಧಿಯಾಗಿ ಸುರಪುರ ಸಂಸ್ಥಾನಕ್ಕೆ ಸೇವೆ ಸಲ್ಲಿಸಿ, ಆಡಳಿತದಲ್ಲಿ ಸುಧಾರಣೆ ಮಾಡಿ ಭಾರತೀಯರೊಡನೆ ಬೆರೆತು ಬಾಳಿ, ಮರಳಿ ಇಂಗ್ಲೆಂಡ್ ಗೆ ಹೋಗಿ, ಅಲ್ಲಿ ಭಾರತದ ಅನಧಿಕೃತ ರಾಯಭಾರಿಯಂತೆ ಕಾರ್ಯ ಮಾಡಿದನು. ಭಾರತದ ಹಿರಿಮೆ-ಗರಿಮೆಗಳನ್ನು, ಧರ್ಮ, ಸಂಸ್ಕೃತಿ, ನಾಗರೀಕತೆ, ಇತಿಹಾಸ, ಕಲೆಗಳನ್ನು ತಿಳಿಸಿಕೊಡಲು ಐತಿಹಾಸಿಕ ಕಾದಂಬರಿಗಳನ್ನು ಬರೆದ. ಟೀಪೂ ಸುಲ್ತಾನ, ತಾರಾ, ಚಾಂದಬೀಬಿ, ಎಂಬ ಬೃಹತ್ ಕಾದಂಬರಿಗಳಲ್ಲಿ ಸಮಗ್ರ ಕರ್ನಾಟಕದ ಜೀವನವನ್ನು ಚಿತ್ರಿಸಿದ್ದಾನೆ.
ಟೇಲರನ ಕುರಿತಾದ ಸಮಗ್ರ ಸಂಶೋಧನೆಯನ್ನು ಡಾ. ಆರ್. ಎಸ್. ಚುಳಕಿ ಅವರು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಪಿಎಚ್.ಡಿ ಪದವಿಗಾಗಿ ಸಲ್ಲಿಸಿದ ಮಹಾಪ್ರಬಂಧದ ಸಂಶೋಧನಾ ಮಾಲಿಕೆಯಾಗಿ ಪ್ರಕಟಗೊಳಿಸಲಾಗಿದೆ. ಇಂತಹ ಜನಪ್ರಿಯ ಆಡಳಿತಗಾರ, ಶ್ರೇಷ್ಠಸಾಹಿತಿ, ಪ್ರಾಮಾಣಿಕ ಇತಿಹಾಸಕಾರನಾದ ಮೆಡೋಸ ಟೇಲರನ ವ್ಯಕ್ತಿತ್ವವನ್ನು ’ಮೆಡೋಸ ಟೇಲರನು ಚಿತ್ರಿಸಿದ ಭಾರತ’ ಗ್ರಂಥದಲ್ಲಿ ಕಾಣಬಹುದು.
©2025 Book Brahma Private Limited.