ವಚನ ಸಾಹಿತ್ಯವನ್ನು ಸರಳವಾಗಿ ಓದುಗರಿಗೆ ತಲುಪಿಸುವ ಕೃತಿ ಕೆ. ಸಿ. ಶಿವಪ್ಪ ಅವರ 'ವಚನ ದರ್ಶನ'. ವಚನ, ಪರವಸ್ತು, ಸಂಸಾರ, ಮನಸ್ಸು, ಶರಣಾಗತಿ, ಅರಿವು, ಭಕ್ತಿ, ಶಿವಪಥ ಇತ್ಯಾದಿ ಅಧ್ಯಾಯಗಳು ಕೃತಿಯಲ್ಲಿವೆ.
ವಚನ ಎಂದರೆ ಪ್ರತಿಜ್ಞೆ, ಆತ್ಮಸಾಕ್ಷಿ. ಶುದ್ದ ದೇಸೀ ಮನೋಭೂಮಿಕೆಯಲ್ಲಿ ಈ ವಚನಗಳು ರೂಪತಳೆದಿವೆ. ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕು ಎಂಬ ಭಾವದಲ್ಲಿ ವಚನಕಾರರು ತಮ್ಮ ಅನಿಸಿಕೆಗಳಿಗೆ ವಾಕ್ ಶಕ್ತಿಯನ್ನು ಧಾರೆ ಎರೆದರು. ವಚನ ಬರಿ ಬುದ್ದಿಯ ವಿಷಯವಲ್ಲ ಅನುಭವದ ಸಂಗತಿ. ಆತ್ಮತೃಪ್ತಿಯ ಅರಿವಿನ ಸಾಧನ. ಸಿದ್ದರಾಮನ ದೃಷ್ಟಿಯಲ್ಲಿ ವಚನಗಳೆಂದರೆ ಈಶ್ವರನನ್ನು ಬೆಳಗುವ ಜ್ಯೋತಿ' ಎಂದು ಕೃತಿ ಪರಿಚಯಿಸುತ್ತದೆ.
ಇಲ್ಲಿ ವಿವಿಧ ವಚನಕಾರರ ವಚನಗಳು ಅದರ ಕುರಿತಾದ ವಿವರಣೆಯನ್ನೂ ಕೆ.ಸಿ ಶಿವಪ್ಪ ಸರಳಗನ್ನಡದಲ್ಲಿ ಕಟ್ಟಿಕೊಟ್ಟಿದ್ದಾರೆ.
©2024 Book Brahma Private Limited.