ಜೈನ ಕಲೆ, ಸಂಸ್ಕೃತಿ, ಹಸ್ತಪ್ರತಿಗಳು, ಜೈನ ಸಿದ್ಧಾಂತಗಳು, ಜೈನ ಸ್ಥಳನಾಮಗಳು, ಜೈನ ವಿದ್ವಾಂಸರು ಹೀಗೆ ಜೈನ ಧರ್ಮದ ವಿರಾಟ ಸ್ವರೂಪವನ್ನು”ಕರಿಯು ಕನ್ನಡಿಯಲ್ಲಿ’ ಎಂಬಂತೆ ಸಂಕ್ಷಿಪ್ತವಾಗಿ ಕಟ್ಟಿಕೊಟ್ಟ ಕೃತಿ ’ಗನ್ಧೋದಕ’. ಅತ್ತಿಮಬ್ಬೆ, ಚಾವುಂಡರಾಯ, ಜೈನ ಸರಸ್ವತಿಯ ವಿಗ್ರಹ, ಜೈನ ಪ್ರಾಚೀನ ವಿದ್ಯಾಕೇಂದ್ರಗಳು ಕುರಿತು ಬರೆದ ಲೇಖನಗಳು ಈ ಕೃತಿಯ ತೂಕವನ್ನು ಹೆಚ್ಚಿಸುತ್ತಿವೆ. ಡಾ. ಎಸ್.ಬಿ. ಪದ್ಮಪ್ರಸಾದ ಅವರು ಮುನ್ನುಡಿ ಬರೆದಿದ್ದು ’ಸಂಕ್ಷಿಪ್ತವಾಗಿ ಬರೆದರೂ ಜೈನ ಧರ್ಮದ ಪ್ರತಿ ಅಂಶಗಳನ್ನು ಅಚ್ಚುಕಟ್ಟಾಗಿ ವಿವರಿಸಿದ್ದು, ಸಂಶೋಧನಾ ಕೃತಿಯ ಮಹತ್ವವನ್ನು ಪಡೆದಿದೆ’ ಎಂದು ಶ್ಲಾಘಿಸಿದ್ದಾರೆ. ಈ ಕೃತಿಯ ಬಹುತೇಕ ಲೇಖನಗಳು ಹೈದ್ರಾಬಾದ್-ಕರ್ನಾಟಕ ಪ್ರದೇಶದ ಜೈನ ಪರಂಪರೆಯ ಸಮಗ್ರ ಚಿತ್ರಣ ನೀಡುತ್ತವೆ.
©2024 Book Brahma Private Limited.