ಪ್ರಸಿದ್ದ ಬೌದ್ದ ಭಿಕ್ಷುವಾದ ಹ್ಯೂಯೆನ್ ತ್ಸಾಂಗ 15 ಸಾವಿರ ಮೈಲುಗಳ ಪ್ರಯಾಣ ನಡೆಸಿ ಭಾರತ ತಲುಪಿದನು,ಹರ್ಷವರ್ಧನ ಮತ್ತು ಎರಡನೇ ಪುಲಕೇಶಿಯರ ಆಳ್ವಿಕೆಯಕಾಲದಲ್ಲಿ ಸುಮಾರು 14 ವರ್ಷಗಳ ಕಾಲ ಭಾರತದ ವಿವಿಧ ಪ್ರಾಂತ್ಯಗಳಲ್ಲಿ ಅಲೆದು ಭಾರತದ ಬಗ್ಗೆ ಅಪಾರ ಮಾಹಿತಿ ಕಲೆ ಹಾಕಿದನು.ಬೌದ್ಧ ಧರ್ಮದ ಬಗ್ಗೆ ಅಪಾರವಾದ ಆಸಕ್ತಿ ಮತ್ತು ಭಕ್ತಿ. ಅಷ್ಟೇ ಅಲ್ಲದೆ ದೇಶಾಂಗ ಜ್ಞಾನ, ಅನ್ಯದೇಶಗಳ ಜನಜೀವನ ಅನುಭವ ಮತ್ತು ರಾಜತಾಂತ್ರಿಕತೆಯಲ್ಲೂ ಆತ ಪರಿಣಿತನಾಗಿದ್ದ ಹ್ಯೂಯೆನ್ ತ್ಸಾಂಗನನ್ನು ಅಂದಿನ ಚೀನಾದ ದೊರೆ ಗೌರವಿಸಿ ದೇಶಾಂಗ ಮತ್ತು ರಾಜ್ಯಾಡಳಿತ ಮಂತ್ರಿಯನ್ನಾಗಿ ಮಾಡಿದನು,ಈ ಮಹಾಪಯಣಿಗನ ಜೀವನ ಕುರಿತು ಕನ್ನಡ ಭಾಷೆಯಲ್ಲಿ ಮೊದಲ ಬಾರಿಗೆ ಪುಸ್ತಕವೊಂದನ್ನು ಬೆಳಕಿಗೆ ತಂದು ಹೆಮ್ಮೆ ರವಿ ಹಂಜ್ ರವರದ್ದು.
©2024 Book Brahma Private Limited.