ಬೌದ್ದ ಮಧ್ಯಮಮಾರ್ಗಿಗಳಾಗಿರುವ ಅಚಲಿಗರು ಕರ್ನಾಟಕದಲ್ಲಿ ಹೇಗೆ ನೆಲೆ ಮಾಡಿಕೊಂಡಿದ್ದಾರೆ ಎನ್ನುವ ಕುತೂಹಲಕಾರಿ ವಿವರಗಳನ್ನು ಈ ಕೃತಿ ಬಿಚ್ಚಿಡುತ್ತದೆ. ಈ ನೆಲದ ಸಂಸ್ಕೃತಿ ನೆಲೆಯಲ್ಲಿ ಅನಿವಾರ್ಯವಾಗಿ ಆಗಲೇ ಬೇಕಿರುವ ಪಲ್ಲಟಗಳನ್ನು ಗುರುತಿಸುವುದರೊಂದಿಗೆ, ಆ ಪಲ್ಲಟಗಳ ಸ್ವರೂಪವನ್ನು, ಅದರ ಹಿಂದಿನ ತಾತ್ವಿಕ ವಿನ್ಯಾಸವನ್ನು ಸಿದ್ಧಪಡಿಸಿಕೊಡುತ್ತಿರುವುದರಿಂದಲೇ ಇದು ಮಹತ್ವದ ಹಾಗೂ ಅನನ್ಯ ಕೃತಿಯೆಂದು ಬೆನ್ನುಡಿಯಲ್ಲಿ ಲಕ್ಷ್ಮೀಪತಿ ಕೋಲಾರ ಅವರು ಅಭಿಪ್ರಾಯಪಡುತ್ತಾರೆ. ಅಚಲ ಮಾರ್ಗ ಏನು ಎನ್ನುವುದರ ವಿವರಗಳನ್ನು ತಿಳಿಸಿಕೊಡುವುದಲ್ಲದೆ, ಆ ಚಿಂತನ ಸಾರವನ್ನು ಕೃತಿ ಹೇಳುತ್ತದೆ. ಜೊತೆಗೆ ಆ ಮಾರ್ಗದಲ್ಲಿ ಸಾಗಿದವರ ಬದುಕನ್ನು ತೆರೆದಿಡುವ ಪ್ರಯತ್ನವನ್ನೂ ಈ ಕೃತಿಯು ಮಾಡುತ್ತದೆ. ಕನ್ನಡದ ನೆಲದಲ್ಲಿ ತಾತ್ವಿಕ ನೆಲೆಗಳ ಮೂಲಗಳನ್ನು ಅರಸುವ ಇದರ ಉದ್ದೇಶ ನಮ್ಮನ್ನು ಬುದ್ಧನ ಕಾಲದವರೆಗೂ ಕೊಂಡೊಯ್ಯುತ್ತದೆ.
©2024 Book Brahma Private Limited.