ಕಪ್ಪೆ ಅರಭಟ್ಟನ ಶಾಸನ; ಸಮಗ್ರ ಅಧ್ಯಯನ ಕೃತಿಯನ್ನು ಇತಿಹಾಸ ತಜ್ಞ ಡಾ. ಷ. ಶೆಟ್ಟರ್ ರಚಿಸಿದ್ದು, ಶಾಸನಗಳ ಸಂಶೋಧನೆ ದೃಷ್ಟಿಯಿಂದ ಮಹತ್ವದ ಕೃತಿಯಾಗಿದೆ. ಶಾಸನ ಪಠ್ಯ, ಅದರ ಅರ್ಥ ವಿವರಣೆ, ವಿವಿಧ ಸಂಬಂಧಿತ ಶಾಸನಗಳೊಂದಿಗೆ ತೌಲನಿಕ ಅಧ್ಯಯನ, ಕಪ್ಪೆ ಅರಭಟ್ಟನ ಶಾಸನದ ಸಮಗ್ರ ಅಧ್ಯಯನದ ಮಹತ್ವ ಇತ್ಯಾದಿ ಅಂಶಗಳು ಈ ಕೃತಿಯ ಹೆಗ್ಗಳಿಕೆಯಾಗಿವೆ. ,
ಷ.ಶೆಟ್ಟರ್ ಅವರು ಹುಟ್ಟಿದ್ದು 11 ಡಿಸೆಂಬರ್ 1935 ರಂದು. ಊರು ಬಳ್ಳಾರಿ ಜಿಲ್ಲೆಯ ಹಂಪಸಾಗರ. ಮೈಸೂರು, ಧಾರವಾಡ ಮತ್ತು ಕೇಂಬ್ರಿಜ್ ಗಳಲ್ಲಿ ಉನ್ನತ ವ್ಯಾಸಂಗ, ಇತಿಹಾಸ, ಪ್ರಾಕ್ತನಶಾಸ್ತ್ರ, ಮಾನವಶಾಸ್ತ್ರ, ಕಲಾ ಇತಿಹಾಸ, ದರ್ಶನಶಾಸ್ತ್ರ ಮತ್ತು ಹಳಗನ್ನಡ ಕುರಿತು 27ಕ್ಕೂ ಹೆಚ್ಚು ಸಂಶೋಧನಾ ಗ್ರಂಥಗಳ ಪ್ರಕಟಣೆ. ವಿವಿಧ ವಿಶ್ವವಿದ್ಯಾಲಯದಲ್ಲಿ ಬೋಧನೆ. 1960 -96, ಭಾರತೀಯ ಕಲಾ ಇತಿಹಾಸ ಸಂಸ್ಥೆಯ ನಿರ್ದೇಶಕತ್ವ 1978-95, ನವದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ ಅಧ್ಯಕ್ಷ ಸ್ಥಾನ-1996-99, ಬೆಂಗಳೂರಿನ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್ ನಲ್ಲಿ ಡಾ.ಎಸ್.ರಾಧಾಕೃಷ್ಣನ್ ಪ್ರಾಧ್ಯಾಪಕತ್ವ 2002-2010, ...
READ MORE