‘ಬಸವಣ್ಣನವರ ವಚನಗಳಲ್ಲಿ ಮಾದಾರ ಚೆನ್ನಯ್ಯ’ ಲೇಖಕ ನಾಗೇಂದ್ರ. ಪಿ ಅವರ ಸಂಶೋಧನಾತ್ಮಕ ಕೃತಿ. ಈ ಕೃತಿಗೆ ವಿಧಾನ ಪರಿಷತ್ ನ ಮಾಜಿ ಸಭಾಪತಿಗಳಾದ ಡಿ.ಹೆಚ್. ಶಂಕರಮೂರ್ತಿ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘12ನೇ ಶತಮಾನದಲ್ಲಿ ನಡೆದ ಶರಣ ಕ್ರಾಂತಿಯಲ್ಲಿ ಬಹುಮುಖ್ಯ ಸಮಾಜ ಸುಧಾರಕರಾಗಿ ಶರಣ ಸಂಸ್ಕೃತಿಯಲ್ಲಿ ಮೊದಲಿಗ ಬಸವಣ್ಣನವರು. ಸಮಸಮಾಜ ನಿರ್ಮಾಣ ಮಾಡುವ ಕನಸು ಕಂಡವರು. ಅದಕ್ಕಾಗಿ ತಳವರ್ಗದವರನ್ನು ಅಪ್ಪಿಕೊಂಡರು, ಅವರನ್ನೇ ತನ್ನ ತಂದೆ ಎನ್ನುವುದರ ಮೂಲಕ ಸಾಮಾಜಿಕ ಪ್ರಜ್ಞೆಯ ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಡಲು ಪ್ರಯತ್ನಿಸಿದವರು. ಇಂತಹದೇ ಬಸವಣ್ಣನವರ ವಚನಗಳನ್ನು ಎತ್ತಿಕೊಂಡು ನಾಗೇಂದ್ರ ಪಿ ಅವರು ಬಸವಣ್ಣನವರ ವಚನಗಳಲ್ಲಿ ಮಾದಾರ ಚೆನ್ನಯ್ಯ ಎಂಬ ಕೃತಿಯ ಮೂಲಕ ತಾವು ಜನ್ಮತಾಳಿದ ವರ್ಗದ ಬಗ್ಗೆ ಗೌರವ ಮತ್ತು ನಂಬಿಕೆಯನ್ನಿಟ್ಟುಕೊಂಡು ಭಾರತದಲ್ಲಿ ಆಕಸ್ಮಿಕವಾಗಿ ಬಂದ ವರ್ಗ ಸಂಘರ್ಷ ಅಥವಾ ಜಾತಿ ಸಂಘರ್ಷದ ಬಗ್ಗೆ ಯಾವುದೇ ರೀತಿಯ ದ್ವೇಷಕಾರದೇ ಪ್ರೀತಿಯಿಂದ, ಸಹಮತದಿಂದ ಪರಿಹಾರ ಮಾಡಬೇಕು ಎಂಬ ಬಸವಣ್ಣನವರ ಉನ್ನತ ಆದರ್ಶಗಳನ್ನು ಬಸವಣ್ಣನವರದೇ ಮಾತುಗಳಲ್ಲಿ ಮಾದಾರ ಚೆನ್ನಯ್ಯನವರ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು ಉಲ್ಲೇಖ ಮಾಡುತ್ತಾ ತಮ್ಮ ಭಾವನೆಗಳನ್ನು ಪ್ರಸ್ತುತಪಡಿಸಿರುವುದು ಒಂದು ಅದ್ಭುತ ಪರಿಕಲ್ಪನೆ ಎಂದಿದ್ದಾರೆ ಡಿ.ಹೆಚ್. ಶಂಕರಮೂರ್ತಿ ಜೊತೆಗೆ ಇಂತಹ ವಿಚಾರಗಳ ಮೂಲಕ ಮೂಡಿಬಂದಿರುವಂತಹ ಒಂದು ಸಮಗ್ರ ಕೃತಿ, ಇಂದನ್ನು ತುಂಬು ಹೃದಯದಿಂದ ಎಲ್ಲರೂ ಸ್ವಾಗತಿಸಬೇಕು’ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
©2024 Book Brahma Private Limited.