ಎಸ್.ಬಿ. ವಸಂತರಾಜಯ್ಯ ಅವರು ಸಂಪಾದಿಸಿರುವ ಕೃತಿ ‘ಕರ್ನಾಟಕ ದಿಗಂಬರ ಜಿನ ಮಂದಿರಗಳು’. ಕರ್ನಾಟಕ ದಿಗಂಬರ ಜೈನ ಮಹಾಮಂಡಲದವರ ಕೋರಿಕೆಯಂತೆ ನವೆಂಬರ್ 1994ರಲ್ಲಿ ಬೆಂಗಳೂರಿನ ಖ್ಯಾತ ವಿದ್ವಾಂಸರಾಗಿದ್ದ ಸನ್ಮಾನ್ಯ ಶ್ರೀ ಎಸ್.ಬಿ. ವಸಂತರಾಜಯ್ಯನವರು ಬಹು ಶ್ರಮವಹಿಸಿ ಕರ್ನಾಟಕ ರಾಜ್ಯದ ಜೈನ ಸಮಾಜದವರ ವಶದಲ್ಲಿರುವ ಸುಮಾರು 696 ಜಿನಮಂದಿರಗಳ ಮತ್ತು ಪಾಳುಬಿದ್ದ /ಭಗ್ನವಾದ/ಅನ್ಯಮತೀಯರ ಮಂದಿರಗಳಾಗಿ ಪರಿವರ್ತಿತವಾದ 330 ಬಸದಿಗಳ ಹಾಗೂ ಅವುಗಳ ಸ್ಥಿತಿಗತಿಗಳ ವಿವರವನ್ನು ಸಂಗ್ರಹಿಸಿ, ವಿಸ್ತಾರವಾದ ಪ್ರಸ್ತಾವನೆಯೊಂದಿಗೆ ಕರ್ನಾಟಕದ ದಿಗಂಬರ ಜಿನಮಂದಿರಗಳು ಕೃತಿಯ ಪ್ರಥಮ ಆವೃತ್ತಿಯನ್ನು ಪ್ರಕಾಶಪಡಿಸಿದರು. ಈ ಆವೃತ್ತಿಯಲ್ಲಿ ಶ್ರೀ ವಸಂತರಾಜಯ್ಯನವರೇ ಹಲಕೆಲವು ಜಿನಮಂದಿರಗಳ ಮಾಹಿತಿ ಕೈಬಿಟ್ಟು ಹೋಗಿರುವ ಸಾಧ್ಯತೆಯಿದೆಯೆಂದು ಉಲ್ಲೇಖಿಸಿದ್ದಾರೆ.
ಎಸ್. ಬಿ. ವಸಂತರಾಜಯ್ಯ ಅವರು 1924 ಸೆಪ್ಟಂಬರ್ 13 ಮೈಸೂರು ಜಿಲ್ಲೆ ಕೆ ಆರ್ ನಗರ ಸಾಲಿಗ್ರಾಮದಲ್ಲಿ ಜನಿಸಿದರು. ತಂದೆ: ಎಸ್. ಬಿ. ಬ್ರಹ್ಮದೇವಯ್ಯ. ತಾಯಿ: ಸರಸ್ವತಮ್ಮ. ಹಲವಾರು ಜೈನ ಸಂಘ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ವ್ಯವಸ್ಥಾಪಕ ಟ್ರಸ್ಟಿ ಹಾಗೂ ಸಾಲಿಗ್ರಾಮ ಜೈನ ಮಿತ್ರ ಮಂಡಳಿ ಬೆಂಗಳೂರು ಇದರ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. `ನಿಷ್ಕಾಮ ಯೋಗಿ - ಕಿರು ಕಾದಂಬರಿ, `ಅಹಿಂಸಾ ಜ್ಯೋತಿ ಮಹಾವೀರ’, ‘ಹೇಮಚಂದ್ರ’ - ಜೀವನ ಚರಿತ್ರ, `ಶ್ರವಣಬೆಳಗೊಳದಿಂದ ಕೊಪ್ಪಳ’ - ಪ್ರಾಚೀನ ಕ್ಷೇತ್ರಗಳ ಪರಿಚಯ, `ಅಷ್ಟಪಾಹುಡ’ - ಅನುವಾದ, ‘ನಿತ್ಯ ...
READ MORE