‘ಸಂಶೋಧನಾ’ ಕೃತಿಯು ನಾಡೋಜ ಕಮಲಾ ಹಂಪನಾ ಅವರ ಸಂಪಾದಿತ ಕೃತಿಯಾಗಿದೆ. ಹತ್ತೊಂಬತ್ತು ಮತ್ತು ಇಪ್ಪತ್ತನೇಯ ಶತಮಾನದ ಹಾಸಿನಲ್ಲಿ ಸಂಶೋಧನೆಯು ಒಂದು ಗಂಭೀರ ಅಧ್ಯಯನ ಶಿಸ್ತಾಗಿ ಬೆಳೆದು ಬಂದ ಪರಿಯನ್ನು ಅರಿಯಲು ನೆರವಾಗುವಂತೆ ಈ ಕೃತಿಯ ಮೊದಲನೆಯ ಹಾಗೂ ಕೊನೆಯ ಅಧ್ಯಾಯವನ್ನು ಸಂಪಾದಕರು ಸಂಯೋಜಿಸಿದ್ದಾರೆ. ನಾನಾರಂಗದಲ್ಲಿನ ಮಹತ್ತರ ಸಾಧನೆ, ಚಿಂತನೆ ಮತ್ತು ವೈವಿಧ್ಯಪೂರ್ಣ ಪ್ರಯೋಗಗಳನ್ನು ಎಂಟು ಜನ ವಿಷಯ ತಜ್ಞರು ಪರಿಚಯಿಸಿದ್ದಾರೆ. ಈ ಸಂಪುಟದಲ್ಲಿ ಅಳವಡಿಸಿರುವ ಬರಹ ಮತ್ತು ಬರಹಗಾರರ ಹೆಸರುಗಳು; ಸಂಶೋಧನಾ ವಿಸ್ತಾರ ವಿನ್ಯಾಸ (ಕಮಲಾ ಹಂಪನಾ), ಸಂಶೋಧನೆ, ಸಂಶೋಧನೆಯ ಪರಿಕಲ್ಪನೆಯಲ್ಲಿ ಆಗಿರುವ ಬದಲಾವಣೆ ( ಎಸ್. ಪಿ. ಪದ್ಮಪ್ರಸಾದ್), ಸಂಶೋಧನೆಯ ಪಾಶ್ಚತ್ಯ ಮತ್ತು ದೇಶಿ ನೆಲೆಗಳು, (ಸಿ. ನಾಗಣ್ಣ), ಸಂಶೋಧನೆಯ ಪರಿಕರಗಳು ಮತ್ತು ಅವುಗಳನ್ನು ಬಳಸಿಕೊಂಡ ಬಗೆ (ಎಂ.ಜಿ ಮಂಜುನಾಥ್), ಸಂಶೋಧನೆ ಮತ್ತು ಸಂಸ್ಕೃತಿ (ತಾಳ್ತಜೆ ವಸಂತಕುಮಾರ್), ಸಂಶೋಧನ ಬರಹಗಗಳ ಭಾಷೆ ( ಸೋಮಶೇಖರ ಗೌಡ), ಸಂಶೋಧನೆ ಮತ್ತು ಸಮಾಜ ಶಾಸ್ತ್ರಗಳು (ಚಂದ್ರಪೂಜಾರಿ), ಸಂಶೋಧನೆಗಾಗಿ ರೂಪಿತವಾದ ಸಂಸ್ಥೆಗಳು ಮತ್ತು ಪತ್ರಿಕೆಗಳು (ಸಂಗಮೇಶ ಸವದತ್ತಿಮಠ), ಸಂಶೋಧನೆ ಕುರಿತಂತೆ ಬಂದಿರುವ ಕೃತಿಗಳ ಪರಿಚಯ-ವಿಮರ್ಶೆ ( ಚಿತ್ತಯ್ಯ ಪೂಜಾರಿ), ಸಂಶೋಧನೆಯ ಫಲಶುತ್ರಿ ಸಮೀಕ್ಷೆ (ಕಮಲಾ ಹಂಪನಾ). ಹೀಗೆ ಅಧ್ಯಾಯಗಳಿವೆ.
©2024 Book Brahma Private Limited.