ಯಾವ ಯಾವ ಶರಣರ ವಚನಗಳು ಯಾವ ಯಾವ ಪ್ರಾಚೀನ ಆಕರಗಳಲ್ಲಿ ದೊರೆಯುತ್ತವೆ ಎಂಬುದನ್ನು ಸೂಚಿಸುವ ಗ್ರಂಥ ಇದು. ಬಸವಯುಗ, ಬಸವೋತ್ತರ ಯುಗದ ವಚನಕಾರರು ಹಾಗೂ ಅಜ್ಞಾತ ವಚನಕಾರರು ರಚಿಸಿದ ಅಪ್ರಕಟಿತ ಹಸ್ತಪ್ರತಿರೂಪದ ವಚನಗಳನ್ನು ಕೃತಿ ಉಲ್ಲೇಖಿಸುತ್ತದೆ. 32 ಶರಣೆಯರೂ ಸೇರಿದಂತೆ ಬಸವಯಗದ ೧೨೫ ಶರಣರು ಹಾಗೂ ಬಸವೋತ್ತರ ಯುಗದ 29 ಶಿವಶರಣರ ಹಸ್ತಪ್ರತಿ ರೂಪದ ವಚನಗಳನ್ನು ಅಲ್ಲದೆ 53 ಅಜ್ಞಾತ ಶರಣರ ವಚನಗಳ ವಿವರವನ್ನು ಇಲ್ಲಿ ಒದಗಿಸಲಾಗಿದೆ.
ಕರ್ನಾಟಕದಲ್ಲಿ ಸಂಶೋಧನಾ ಕ್ಷೇತ್ರದ ಪ್ರಮುಖ ಹೆಸರು ಎಂ.ಎಂ. ಕಲಬುರ್ಗಿ. ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲ ಗ್ರಾಮದಲ್ಲಿ 1938ರ ನವೆಂಬರ್ 28ರಂದು ಜನಿಸಿದರು. ತಾಯಿ ಗುರಮ್ಮ; ತಂದೆ ಮಡಿವಾಳಪ್ಪ. ಕಲಬುರ್ಗಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ (1960) ಮತ್ತು ಎಂ.ಎ (1962) ಪದವಿ ಪಡೆದ ಅವರು ಸಲ್ಲಿಸಿದ ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ (1968) ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಸಂದಿತ್ತು. ಕರ್ನಾಟಕ ಕಾಲೇಜಿನಲ್ಲಿ ...
READ MORE