‘ಚಿತ್ರದುರ್ಗ ಜಿಲ್ಲಾ ಇತಿಹಾಸ ಅಧ್ಯಯನದ ವ್ಯಾಪಕತೆ ಮತ್ತು ಸಾಧ್ಯತೆ - ಒಂದು ಶತಮಾನ’ ಲಕ್ಷ್ಮಣ್ ತೆಲಗಾವಿ ಅವರ ರಚನೆಯಾಗಿದೆ. ಚಿತ್ರದುರ್ಗ ಜಿಲ್ಲೆಯು ಐತಿಹಾಸಿಕವಾಗಿ ಬಹಳ ಮಹತ್ವದ ಸ್ಥಳವೆಂದು ಗುರುತಿಸಲಾಗಿದೆ. ಅನೇಕ ಕಾದಂಬರಿಕಾರರು ಸಾಹಿತಿ ಲೇಖಕರು ತಮ್ಮ ಕೃತಿಗಳಿಗೆ ಪರಿಸರದ ಹಿನ್ನೆಲೆಯಾಗಿ ಈ ಸ್ಥಳವನ್ನು ಆಯ್ದುಕೊಂಡಿದ್ದಾರೆ. ಚಾರಿತ್ರಿಕವಾಗಿ ಸ್ಮಾರಕ ಶಾಸನಗಳ ಆಧಾರದಿಂದ ಪ್ರಸಿದ್ಧವಾದ ಈ ಪ್ರಾದೇಶಿಕ ವಿವರಗಳನ್ನು ಕಲೆ-ಸಾಹಿತ್ಯ -ಸಂಸ್ಕೃತಿ ಮತ್ತು ಜನಜೀವನದ ಆಧಾರಗಳ ಮೇಲೆ ಸಂಶೋಧನೆ ನಡೆಸಿ ರೂಪಿಸಿದ ಈ ಪುಸ್ತಕವು ಜಿಲ್ಲೆಯ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಸಲು ಸಮರ್ಥವಾಗಿದೆ.
ಇತಿಹಾಸಜ್ಞ, ಸಂಶೋಧಕ ಲಕ್ಷ್ಮಣ್ ತೆಲಗಾವಿಯವರು 1947 ಜನವರಿ 01 ಹುಟ್ಟಿದ್ದು ಚಿತ್ರದುರ್ಗದಲ್ಲಿ. ಹಲವಾರು ಐತಿಹಾಸಿಕ, ಸಾಮಾಜಿಕ ಚಳುವಳಿಗಳ ಗ್ರಂಥಗಳ ರಚಿಸಿ ಮತ್ತು ಪ್ರಕಟಿಸಿದ್ಧಾರೆ. ಚಿತ್ರದುರ್ಗ ದರ್ಶಿನಿ, ಇದು ಚಿತ್ರದುರ್ಗ, ಚಿತ್ರದುರ್ಗ ಹ್ಯಾನ್ ಇನ್‌ಸೈಟ್, ಬುರುಗು (ಚಿಂತನ ಲೇಖನಗಳು), ಕರ್ನಾಟಕ ಹಿಂದುಳಿದ ವರ್ಗಗಳ ಮತ್ತು ದಲಿತ ಚಳುವಳಿಗಳು, ಮೌರ್ಯ ಮತ್ತು ಶಾತವಾಹನಯುಗ, ಚಿತ್ರದುರ್ಗಜಿಲ್ಲಾ ಇತಿಹಾಸ, ಚಿತ್ರದುರ್ಗ ನಾಯಕ ಅರಸರು, ವಿಜಯನಗರಕಾಲದ ರಾಮಾನುಜಕೂಟಗಳು, ಎಪ್ಪತ್ತೇಳು ಪಾಳಯಗಾರರು, ಚಿತ್ರದುರ್ಗದ ಒನಕೆ ಓಬವ್ವ, ಚಾರಿತ್ರಿಕ ವಿವೇಚನೆ, ದೊಡ್ಡೇರಿಕದನ ಮುಂತಾದ ಕೃತಿಗಳನ್ನು ಸ್ವಾತಿ ಪ್ರಕಾಶನ, ವಾಲ್ಮೀಕಿ ಸಾಹಿತ್ಯ ಸಂಪದ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯಗಳು ...
READ MOREಹೊಸತು - ಎಪ್ರಿಲ್ -2005
ಚಿತ್ರದುರ್ಗ ಜಿಲ್ಲೆಯು ಐತಿಹಾಸಿಕವಾಗಿ ಬಹಳ ಮಹತ್ವದ ಸ್ಥಳವೆಂದು ಗುರುತಿಸಲಾಗಿದೆ. ಅನೇಕ ಕಾದಂಬರಿಕಾರರು ಸಾಹಿತಿ ಲೇಖಕರು ತಮ್ಮ ಕೃತಿಗಳಿಗೆ ಪರಿಸರದ ಹಿನ್ನೆಲೆಯಾಗಿ ಈ ಸ್ಥಳವನ್ನು ಆಯ್ದುಕೊಂಡಿದ್ದಾರೆ. ಚಾರಿತ್ರಿಕವಾಗಿ ಸ್ಮಾರಕ ಶಾಸನಗಳ ಆಧಾರದಿಂದ ಪ್ರಸಿದ್ಧವಾದ ಈ ಪ್ರಾದೇಶಿಕ ವಿವರಗಳನ್ನು ಕಲೆ-ಸಾಹಿತ್ಯ -ಸಂಸ್ಕೃತಿ ಮತ್ತು ಜನಜೀವನದ ಆಧಾರಗಳ ಮೇಲೆ ಸಂಶೋಧನೆ ನಡೆಸಿ ರೂಪಿಸಿದ ಈ ಪುಸ್ತಕವು ಜಿಲ್ಲೆಯ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಸಲು ಸಮರ್ಥವಾಗಿದೆ. ಸ್ಥಳೀಯ ಆಚರಣೆಗಳು ಮತ್ತು ಜಾನಪದೀಯ ಅಧ್ಯಯನದ ಮೂಲಕವೂ ಈ ಜಿಲ್ಲೆ ಶ್ರೀಮಂತ ವಾಗಿದೆ. ದುರ್ಗದ ಚಾರಿತ್ರಿಕ ಘಟನೆಗಳನ್ನಾಧರಿಸಿ ತೆಗೆಯಲಾದ ಚಲನ ಚಿತ್ರಗಳ ಯಶಸ್ಸು ಹಾಗೂ ಇನ್ನಿತರ ತಾಲೂಕು ಮಟ್ಟದ ಚಾರಿತ್ರಿಕ ದಾಖಲೆಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ಸುಮಾರು ಒಂದು ಶತಮಾನ ಕಾಲದ ವಿವರಗಳನ್ನು ಸಂಗ್ರಹಿಸಿ ಅಧ್ಯಯನ ಮಾಡಿದ್ದು ಚಿತ್ರದುರ್ಗದ ಬಗ್ಗೆ ಅಮೂಲ್ಯ ಮಾಹಿತಿಯನ್ನೊದಗಿಸುವ ಆಕರವಾಗಿದೆ.