ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ಒಟ್ಟು 1915 ಗ್ರಾಮಗಳಿವೆ. ಅವುಗಳಲ್ಲಿ 546 ಗ್ರಾಮಗಳಲ್ಲಿ ಒಟ್ಟು 2139 ಶಾಸನಗಳು ದೊರೆತಿವೆ. ಇವುಗಳಲ್ಲಿ 947 ಶಾಸನಗಳು ಪ್ರಕಟಿತ. ಧಾರವಾಡ ಜಿಲ್ಲೆಯ 16 ತಾಲೂಕುಗಳಲ್ಲಿ ಸಮೀಕ್ಷಾ ಕಾರ್ಯ ನಡೆಸಿ ಎಂ.ಎಂ. ಕಲಬುರ್ಗಿ ಕೃತಿಯನ್ನು ಹೊರತಂದಿದ್ದಾರೆ. ಪ್ರಕಟಿತ ಮತ್ತು ಅಪ್ರಕಟಿತ ಎರಡೂ ಬಗೆಯ ಶಾಸನಗಳ ವಿವರ ಗ್ರಂಥದಲ್ಲಿ ದೊರೆಯುತ್ತದೆ. ಶಾಸನ ದೊರೆತ ಗ್ರಾಮ, ಸ್ಥಳ, ಬರೆಯಿಸಿದ ಅರಸ, ಶಾಸನಗಳ ಸ್ವರೂಪ, ಉದ್ದೇಶ, ಹಿನ್ನೆಲೆ, ಭಾಷೆ ಇತ್ಯಾದಿ ವಿವರಗಳನ್ನು ಕೃತಿಯಲ್ಲಿ ನೀಡಲಾಗಿದೆ.
©2024 Book Brahma Private Limited.