ಹಂಪನಾ ವಾಙ್ಮಯ’ ಹಂಪನಾ ಅವರ ಕೃತಿಗಳ ’ತಾಂತ್ರಿಕ ವಿವರಣೆ’ ಮತ್ತು ’ಪುಸ್ತಕಸಾರ’ಗಳೆರನ್ನೂ ಸಂಯೋಜಿಸಿ ಸಿದ್ಧಪಡಿಸಿರುವ ಕೃತಿ. ಪುಸ್ತಕದ ವಿಷಯ, ಪುಸ್ತಕದ ಆಕಾರ, ಪುಟಗಳು, ಪ್ರಕಾಶಕರು, ಪ್ರಕಟಣೆಯ ಸ್ಥಳ, ವರ್ಷ ಮೊದಲಾದ ’ಪುಸ್ತಕ ವಿವರ’(Bibliographic Details)ಗಳನ್ನು ಸಂಗ್ರಹಿಸಲಾಗಿದೆ. ಪುಸ್ತಕಗಳ ಮರುಮುದ್ರಣ ವಿವರಗಳು, ಪರಿಷ್ಕೃತ ಆವೃತ್ತಿ ವಿವರಗಳನ್ನೂ ದಾಖಲಿಸಲಾಗಿದೆ. ಇವುಗಳ ಜೊತೆಗೆ, ಪುಸ್ತಕದ ಬಗ್ಗೆ ವಿದ್ವತ್ ವಲಯದಿಂದ ವ್ಯಕ್ತವಾದ ಅಭಿಪ್ರಾಯಗಳನ್ನೂ ಸಂಕ್ಷಿಪ್ತವಾಗಿ ಸಂಗ್ರಹಿಸಿಕೊಳ್ಳಲಾಗಿದೆ. ಜೊತೆಗೆ ಪುಸ್ತಕದ ’ಸಾರ’(Abstract)ವನ್ನು ಸಂಗ್ರಹಿಸಿ ಕೊಡಲಾಗಿದೆ.
ವೃತ್ತಿಯಿಂದ ಗ್ರಂಥಪಾಲಕರಾಗಿರುವ ಡಾ. ಬಿ.ಆರ್. ಸತ್ಯನಾರಾಯಣ ಅವರು ಪ್ರವೃತ್ತಿಯಿಂದ ಸಂಶೋಧಕ- ಲೇಖಕರೂ ಹೌದು. ಕೃಷಿಯಲ್ಲಿ ಆಸಕ್ತರಾಗಿರುವ ಸತ್ಯನಾರಾಯಣ ಅವರು ಹಳ್ಳಿ-ನಗರಗಳ ನಡುವೆ ಓಡಾಡಿದ ಅನುಭವದ ಹಿನ್ನೆಲೆಯಲ್ಲಿ ’ವೈತರಣೀ ದಡದಲ್ಲಿ (ಕವನ ಸಂಕಲನ) ಮತ್ತು ಮುಡಿ (ಕಥಾ ಸಂಕಲನ) ಪ್ರಕಟಿಸಿದ್ದಾರೆ. ಕನ್ನಡ ಛಂದಸ್ಸು: ಸಂಕ್ಷಿಪ್ತ ಪರಿಚಯ, ಕಲ್ಯಾಣದ ಚಾಲುಕ್ಯರು, ಸರಸ್ವತಿ- ವಿಸ್ಮಯ ಸಂಸ್ಕೃತಿ ಸಂಶೋಧನಾ ಕೃತಿ ರಚಿಸಿದ್ದಾರೆ. ಹಿರಿಯ ಸಂಶೋಧಕ ಹಂ.ಪ.ನಾಗರಾಜಯ್ಯ ಅವರ ಕೃತಿಗಳ ಸಾರ ಸೂಚಿ ಹೊಂದಿರುವ ’ಹಂಪನಾ ವಾಙ್ಮಯ’ ಪ್ರಕಟಿಸಿರುವ ಅವರು ಪೇಜತ್ತಾಯ ಅವರ ’ರೈತನಾಗುವ ಹಾದಿಯಲ್ಲಿ’ ಮತ್ತು ’ಕಾಗದದ ದೋಣಿ’ ಕೃತಿಗಳನ್ನು ಸಂಪಾದಕರಾಗಿ ಹೊರ ...
READ MORE