'ಅಧ್ಯಯನದ ವಿಧಿವಿಧಾನಗಳು' ಅಧ್ಯಯನಾಸಕ್ತರು ಅನುಸರಿಸಬೇಕಾದ ಪ್ರಮುಖ ಅಂಶಗಳನ್ನು ವಿವರಿಸುವ ಕೃತಿ.
ಈ ಕೃತಿ ಮೂರು ಭಾಗಗಳಲ್ಲಿ ಸಂಯೋಜನೆಗೊಂಡಿದೆ. ಮೊದಲನೆಯ ಭಾಗದಲ್ಲಿ ಅಧ್ಯಯನದ ಅರ್ಥ, ಸ್ಥಿತಿಗತಿ, ಸಮಸ್ಯೆ, ಪ್ರಬಂಧದ ತಾಂತ್ರಿಕ-ತಾತ್ವಿಕ ಕುರಿತಾದ ’ವೈಧಾನಿಕತೆ’ಯನ್ನು, ಎರಡನೆಯ ಭಾಗದಲ್ಲಿ , ಅಧ್ಯಯನದಲ್ಲಿ ಅಳವಡಿಸಿಕೊಳ್ಳಬಹುದಾದ ಶಿಸ್ತುಗಳನ್ನೊಳಗೊಂಡ ’ಅನ್ವಯಿಕತೆ’ ಹಾಗೂ ಮೂರನೇ ಭಾಗದಲ್ಲಿ ನಾಡಿನ ಸಂಶೋಧಕರಾದ ಕಪಟರಾಳ, ಶಂಬಾ, ಗೋವಿಂದ ಪೈ, ಎಂ.ಎನ್. ಶ್ರೀನಿವಾಸ್ ಅವರ ವೈಧಾನಿಕತೆಯನ್ನೊಳಗೊಂಡ ’ಪ್ರಾಯೋಗಿಕತೆ’ಯನ್ನು ಸಂಪಾದಿಸಲಾಗಿದೆ.
ಡಾ. ಕೆ. ರವೀಂದ್ರನಾಥ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯ ಹಸ್ತಪ್ರತಿಶಾಸ್ತ್ರದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು. ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಎಂ.ಎ ಪದವಿ (1990) ಪದವಿ ಪಡೆದಿರುವ ಅವರು ’ಕನ್ನಡ ಸಾಹಿತ್ಯ - ಮಠ ಮಾನ್ಯಗಳ ಸೇವೆ’ ಎಂಬ ವಿಷಯದಲ್ಲಿ ಅಧ್ಯಯನ ನಡೆಸಿ ಪಿಎಚ್. ಡಿ ಪದವಿ (1996) ಪಡೆದಿದ್ದಾರೆ. ಹಳಕನ್ನಡ -ನಡುಕನ್ನಡ ಸಾಹಿತ್ಯ , ಹಸ್ತಪ್ರತಿಶಾಸ್ತ್ರ, ಶಾಸನ ಶಾಸ್ತ್ರ, ಗ್ರಂಥ ಸಂಪಾದನೆ, ಸಂಸ್ಕ್ರತಿ ಅಧ್ಯಯನಗಳು, ವಚನ ಸಾಹಿತ್ಯ ಅವವರ ಸಂಶೋಧನಾ ಆಸಕ್ತಿಯ ಕ್ಷೇತ್ರಗಳು.ಹಂಪಿ ವಿಶ್ವವಿದ್ಯಾಲಯದಲ್ಲಿ ಕೆಲಸಕ್ಕೆ ಸೇರುವ ಮುನ್ನ ಅವರು ಬಳ್ಳಾರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರಾಗಿದ್ದರು. ಸಂಶೋಧನೆ: ಮಾನ್ಯ , ಕನ್ನಡ ದಾಖಲು ಸಾಹಿತ್ಯ, ಆಗ್ನಿದಿವ್ಯ ...
READ MORE